ಮಳೆಯನ್ನೂ ಲೆಕ್ಕಿಸದೇ ಕೇದಾರನಾಥ ಗುಹೆಗೆ ತೆರಳಿ ಪ್ರಧಾನಿ ಮೋದಿ ಧ್ಯಾನ!

ಕೇದಾರನಾಥ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ ದೇಗುಲದಿಂದ ದೂರವಿರುವ ಗುಹೆಯಲ್ಲಿ ಕುಳಿತು ಧ್ಯಾನ ಮಾಡಿದ್ದಾರೆ.

Published: 18th May 2019 12:00 PM  |   Last Updated: 18th May 2019 04:28 AM   |  A+A-


PM Modi meditates inside holy cave In Kedarnath

ಮಳೆಯನ್ನೂ ಲೆಕ್ಕಿಸದೇ ಕೇದಾರನಾಥ ಗುಹೆಯಲ್ಲಿ ಪ್ರಧಾನಿ ಮೋದಿ ಧ್ಯಾನ!

Posted By : SBV SBV
Source : Online Desk
ಕೇದಾರನಾಥ: ಕೇದಾರನಾಥ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ ದೇಗುಲದಿಂದ ದೂರವಿರುವ ಗುಹೆಯಲ್ಲಿ ಕುಳಿತು ಧ್ಯಾನ ಮಾಡಿದ್ದಾರೆ. 

2019 ರ ಲೋಕಸಭಾ ಚುನಾವಣೆಗೆ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಕೇದಾರನಾಥ-ಬದ್ರಿನಾಥ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರೆ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಗುಜರಾತ್ ನಲ್ಲಿರುವ ಸೋಮನಾಥ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. 

ಕೇದಾರನಾಥ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಅಲ್ಲಿನ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆಯನ್ನೂ ನಡೆಸಿದರು. ಪರಿಶೀಲನೆ ಮುಕ್ತಾಯಗೊಂಡ ಬಳಿಕ  ದೇವಾಲಯದಿಂದ 1.5 ಕಿ.ಮೀ ದೂರವಿರುವ ಗುಹೆಗೆ  ಮಳೆಯನ್ನೂ ಲೆಕ್ಕಿಸದೇ  ತೆರಳಿ, ಧ್ಯಾನ ಮಗ್ನರಾದರು. ಪ್ರಧಾನಿ ನರೇಂದ್ರ ಮೋದಿ ಗುಹೆಯಲ್ಲಿ ಧ್ಯಾನ ಮಗ್ನರಾಗಿರುವ ವಿಡಿಯೋ ವೈರಲ್ ಆಗುತ್ತಿದೆ. 
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp