ನೋ ಪಾರ್ಕಿಂಗ್: ಬೈಕ್ ತೆಗಿ ಅಂದಿದ್ದಕ್ಕೆ ಮೈ ಮುಟ್ಟಿದ ಸವಾರ, ಲೇಡಿ ಕಾನ್‌ಸ್ಟೇಬಲ್ ಮಾಡಿದ್ದೇನು?

ನೋ ಪಾರ್ಕಿಂಗ್ ನಲ್ಲಿ ಬೈಕ್ ನಲ್ಲಿದ್ದ ಸವಾರನಿಗೆ ಬೈಕ್ ತೆಗೆಯಿರಿ ಎಂದು ಹೇಳಿದ್ದಕ್ಕೆ ಲೇಡಿ ಕಾನ್‌ಸ್ಟೇಬಲ್ ಮೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಸವಾರನನ್ನು ಬಂಧಿಸುವಲ್ಲಿ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: ನೋ ಪಾರ್ಕಿಂಗ್ ನಲ್ಲಿ ಬೈಕ್ ನಲ್ಲಿದ್ದ ಸವಾರನಿಗೆ ಬೈಕ್ ತೆಗೆಯಿರಿ ಎಂದು ಹೇಳಿದ್ದಕ್ಕೆ ಲೇಡಿ ಕಾನ್‌ಸ್ಟೇಬಲ್ ಮೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಸವಾರನನ್ನು ಬಂಧಿಸುವಲ್ಲಿ ಕಾನ್‌ಸ್ಟೇಬಲ್ ಯಶಸ್ವಿಯಾಗಿದ್ದಾರೆ.
ಮುಂಬೈನ ಅಗ್ರಿಪದದಲ್ಲಿ ಶುಕ್ರವಾರ ರಾತ್ರಿ 7 ಗಂಟೆ ಸುಮಾರಿನಲ್ಲಿ 28 ವರ್ಷದ ಬೈಕ್ ಸವಾರ ಕೃಷ್ಣ ಮೇಸ್ಕರ್ ನೋ ಪಾರ್ಕಿಂಗ್ ನಲ್ಲಿ ಬೈಕ್ ನಿಲ್ಲಿಸಿದ್ದ. ಅದನ್ನು ಕಂಡ ಕಾನ್‌ಸ್ಟೇಬಲ್ ಅನ್ನು ತೆಗೆಯುವಂತೆ ಸೂಚಿಸಿದ್ದಾರೆ. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಈ ವೇಳೆ ಗರಂ ಆದ ಬೈಕ್ ಸವಾರ ಕಾನ್‌ಸ್ಟೇಬಲ್ ಜತೆ ಅಸಭ್ಯವಾಗಿ ವರ್ತಿಸಿದ್ದಾನೆ. ನಂತರ ಬೈಕ್ ಅನ್ನು ವೇಗವಾಗಿ ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ. 
ಕೂಡಲೇ ಲೇಡಿ ಕಾನ್‌ಸ್ಟೇಬಲ್ ಮುಂದಿನ ಸಿಗ್ನಲ್ ನಲ್ಲಿದ್ದ ಪೊಲೀಸರಿಗೆ ಬೈಕ್ ನಂಬರ್ ನೀಡಿ ಬಂಧಿಸುವಂತೆ ಸೂಚಿಸಿದ್ದರು. ಅದರಂತೆ ಮುಂದಿನ ಸಿಗ್ನಲ್ ನಲ್ಲಿ ನಿಂತಿದ್ದ ಕೃಷ್ಣನನ್ನು ಪೊಲೀಸರು ಬಂಧಿಸಿದ್ದಾರೆ.
ಈತನ ವಿರುದ್ಧ ಲೈಂಗಿಕ ಕಿರುಕುಳ, ಕರ್ತವ್ಯ ನಿರತ ಕಾನ್‌ಸ್ಟೇಬಲ್ಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com