ನನ್ನ ಬದಲಿಸಿ ಮುಖ್ಯಮಂತ್ರಿಯಾಗಲು ಸಿಧು ಆಪೇಕ್ಷೆ- ಕ್ಯಾಪ್ಟನ್ ಅಮರೀಂದರ್ ಸಿಂಗ್

ಮಾಜಿ ಕ್ರಿಕೆಟ್ ಆಟಗಾರ, ರಾಜಕಾರಣಿ ನವಜೋತ್ ಸಿಂಗ್ ಸಿಧು ಆಗಾಗ್ಗೆ ಪರೋಕ್ಷ ಮಾಡುತ್ತಿರುವ ದಾಳಿ ಬಗ್ಗೆ ಪ್ರತಿಕ್ರಿಯಿಸಿರುವ ಪಂಜಾಬ್ ಮುಖ್ಯಮಂತ್ರಿ, ಕ್ಯಾಪ್ಟನ್ ಅಮರೀಂದರ್ ಸಿಂಗ್ ನನ್ನ ಬದಲಿಸಿ ಅವರೇ ಮುಖ್ಯಮಂತ್ರಿಯಾಗಲು ಬಯಸಿದ್ದಾರೆ ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

Published: 19th May 2019 12:00 PM  |   Last Updated: 19th May 2019 03:56 AM   |  A+A-


Captain Amarinder singh

ಕ್ಯಾಪ್ಟನ್ ಅಮರೀಂದರ್ ಸಿಂಗ್

Posted By : ABN ABN
Source : PTI
ಚಂಡೀಗಡ: ಮಾಜಿ ಕ್ರಿಕೆಟ್ ಆಟಗಾರ, ರಾಜಕಾರಣಿ ನವಜೋತ್ ಸಿಂಗ್ ಸಿಧು ಆಗಾಗ್ಗೆ ಪರೋಕ್ಷ ಮಾಡುತ್ತಿರುವ ದಾಳಿ ಬಗ್ಗೆ ಪ್ರತಿಕ್ರಿಯಿಸಿರುವ ಪಂಜಾಬ್ ಮುಖ್ಯಮಂತ್ರಿ, ಕ್ಯಾಪ್ಟನ್ ಅಮರೀಂದರ್ ಸಿಂಗ್   ನನ್ನ ಬದಲಿಸಿ  ಅವರೇ ಮುಖ್ಯಮಂತ್ರಿಯಾಗಲು ಬಯಸಿದ್ದಾರೆ ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಈ ಹಿಂದಿನ ಕೆಲ ಕಾರ್ಯಕ್ರಮಗಳಲ್ಲಿಯೂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಹಾಗೂ ನವಜೋತ್ ಸಿಂಗ್ ಸಿಧು ನಡುವಿನ ಭಿನ್ನಾಭಿಪ್ರಾಯ ಭುಗಿಲೆದಿತ್ತು.

ಸಿಧು ಮಹತ್ವಾಕಾಂಕ್ಷಿ. ಪ್ರತಿಯೊಬ್ಬರಿಗೂ ತಮ್ಮದೇ ಆದ ಮಹತ್ವಕಾಂಕ್ಷೆ ಇರುತ್ತದೆ. ಬಾಲ್ಯದಿಂದಲೂ ಆತನನ್ನು ನಾನು ನೋಡುತ್ತಿದ್ದೇನೆ. ಅವರ ಅಭಿಪ್ರಾಯದಲ್ಲಿ ನನ್ನದೇನೂ ತಾಕರಾರು ಇಲ್ಲ. ಆದರೆ, ನನ್ನ ಬದಲಿಗೆ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಅದು ಅವರ ಪ್ರಮುಖ ಉದ್ದೇಶವಾಗಿದೆ. ಇದು ಪಕ್ಷ ಹಾಗೂ ಚುನಾವಣೆಗೆ ಸ್ಪರ್ಧಿಸುವವರ ಮೇಲೆ ಪರಿಣಾಮ ಬೀರಲಿದೆ. ನನ್ನ ಮೇಲೆ ಬಿರುವುದಿಲ್ಲ ಎಂದು ಹೇಳಿದ್ದಾರೆ.

ಸಿಧು ಅವರ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಸೂಕ್ತ ರೀತಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳಲಿದೆ. ಕೇಂದ್ರ ನಾಯಕರ ನಿರ್ಧಾರದ ಬಗ್ಗೆ ಎದುರು ನೋಡುತ್ತಿದ್ದೇನೆ.ಕಾಂಗ್ರೆಸ್ ಪಕ್ಷ ಅಶಿಸ್ತು ಸಹಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ಅಮೃತಸರ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರ ನಿರ್ಧಾರದ ಬಗ್ಗೆ ಸಿಧು ಪತ್ನಿ ನವಜೋತ್ ಕೌರ್ ಸಿಧು ಅಸಮಾಧಾನ ವ್ಯಕ್ತಪಡಿಸಿದ್ದರು. ಇದನ್ನು ನವಜೋತ್ ಸಿಂಗ್ ಸಿಧು ಕೂಡಾ ಬೆಂಬಲಿಸಿದ್ದರು.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp