ಕಾಂಗ್ರೆಸ್‌, ನ್ಯಾಶನಲ್‌ ಹೆರಾಲ್ಡ್‌ ವಿರುದ್ಧ ಮಾನನಷ್ಟ ಮೊಕದ್ದಮೆ ಹಿಂಪಡೆದ ಅನಿಲ್‌ ಅಂಬಾನಿ

ರಾಫೆಲ್ ಡೀಲ್ ಗೆ ಕುರಿತ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕರು ಹಾಗೂ ನ್ಯಾಶನಲ್‌ ಹೆರಾಲ್ಡ್‌ ಪತ್ರಿಕೆಯ ವಿರುದ್ಧ....

Published: 21st May 2019 12:00 PM  |   Last Updated: 21st May 2019 08:02 AM   |  A+A-


Anil Ambani to withdraw defamation suits against Congress, National Herald

ಅನಿಲ್ ಅಂಬಾನಿ

Posted By : LSB LSB
Source : PTI
ಅಹ್ಮದಾಬಾದ್‌: ರಾಫೆಲ್ ಡೀಲ್ ಗೆ ಕುರಿತ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕರು ಹಾಗೂ ನ್ಯಾಶನಲ್‌ ಹೆರಾಲ್ಡ್‌ ಪತ್ರಿಕೆಯ ವಿರುದ್ಧ ಅಹ್ಮದಾಬಾದ್‌ ಕೋರ್ಟ್ ನಲ್ಲಿ ದಾಖಲಿಸಿದ್ದ 5 ಸಾವಿರ ಕೋಟಿ ರುಪಾಯಿಗಳ ಮಾನನಷ್ಟ ಮೊಕದ್ದಮೆ ಪ್ರಕರಣವನ್ನು ಹಿಂಪಡೆಯಲು ಅನಿಲ್‌ ಅಂಬಾನಿ ಅವರ ರಿಲಯನ್ಸ್‌ ಗ್ರೂಪ್‌ ನಿರ್ಧರಿಸಿದೆ.

ಅಹ್ಮದಾಬಾದ್‌ ಸಿಟಿ ಸಿವಿಲ್‌ ಮತ್ತು ಸೆಶನ್ಸ್‌ ನ್ಯಾಯಾಧೀಶ ಪಿ ಜೆ ತಮಕುವಾಲಾ ಅವರು ಈ ಸಿವಿಲ್ ಮಾನನಷ್ಟ ಮೊಕದ್ದಮೆ ಪ್ರಕರಣದ ವಿಚಾರಣೆ ನಡೆಸುತ್ತಿದ್ದರು.

ಪ್ರತಿವಾದಿಗಳಿಗೆ ನಾವು ಮಾನಹಾನಿ ಪ್ರಕರಣವನ್ನು ಹಿಂಪಡೆಯುತ್ತಿವುದಾಗಿ ತಿಳಿಸಿದ್ದೇವೆ ಎಂದು ದೂರದಾರರ ಪರ ವಕೀಲ ರಸೇಶ್‌ ಪಾರಿಖ್‌ ಅವರು ಇಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp