ಅಕ್ರಮ ಆಸ್ತಿ ಪ್ರಕರಣ: ಮುಲಾಯಂ ಸಿಂಗ್ ಮತ್ತು ಅಖಿಲೇಶ್ ಯಾದವ್ ಗೆ ಸಿಬಿಐ ಕ್ಲೀನ್ ಚಿಟ್

ಅಕ್ರಮ ಆಸ್ತಿ ಕೇಸಿನಲ್ಲಿ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಮತ್ತು ಅವರ ...

Published: 21st May 2019 12:00 PM  |   Last Updated: 21st May 2019 12:14 PM   |  A+A-


Akhilesh Yadav and Mulayam Singh Yadav

ಅಖಿಲೇಶ್ ಯಾದವ್ ಮತ್ತು ಮುಲಾಯಂ ಸಿಂಗ್ ಯಾದವ್

Posted By : SUD SUD
Source : PTI
ನವದೆಹಲಿ: ಅಕ್ರಮ ಆಸ್ತಿ ಕೇಸಿನಲ್ಲಿ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಮತ್ತು ಅವರ ಪುತ್ರ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಗೆ ಕೇಂದ್ರ ತನಿಖಾ ದಳ(ಸಿಬಿಐ) ಕ್ಲೀನ್ ಚಿಟ್ ನೀಡಿದೆ.

ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಲಾಗಿದ್ದ ಅಫಿಡವಿಟ್ಟಿಗೆ ಸಂಬಂಧಿಸಿದಂತೆ ತನಿಖಾ ದಳ ಕ್ಲೀನ್ ಚಿಟ್ ನೀಡಿದೆ.

ಸಿಬಿಐ ತನ್ನ ಅಫಿಡವಿಟ್ಟಿನಲ್ಲಿ, ಈ ಪ್ರಕರಣದ ತನಿಖೆಯನ್ನು 2013ರ ಆಗಸ್ಟ್ 7ರಂದು ಮುಕ್ತಾಯಗೊಳಿಸಿದ್ದು, ತಂದೆ ಮಗನ ಮೇಲೆ ಕೇಸು ದಾಖಲಿಸಲು ಯಾವುದೇ ಸಾಕ್ಷಿಗಳು ದೊರೆತಿಲ್ಲ ಎಂದು ಹೇಳಿದೆ.

ಈ ಹಿಂದೆ ಆದೇಶ ನೀಡಿದ್ದ ಸುಪ್ರೀಂ ಕೋರ್ಟ್ ಸಿಬಿಐಗೆ ಸ್ಥಿತಿ ವರದಿ ಸಲ್ಲಿಸುವಂತೆ ಆದೇಶ ನೀಡಿತ್ತು. ರಜಾ ಅವಧಿ ಮುಗಿದ ನಂತರ ಸುಪ್ರೀಂ ಕೋರ್ಟ್ ನ ಕಾರ್ಯಕಲಾಪ ಆರಂಭವಾದ ಮೇಲೆ ಜುಲೈಯಲ್ಲಿ ಈ ಪ್ರಕರಣದ ವಿಚಾರಣೆ ಬರಲಿದೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp