ರದ್ದುಗೊಂಡ ಟಿಕೆಟ್ ನಿಂದ ಭಾರತೀಯ ರೈಲ್ವೆಗೆ ಬಂದ ಆದಾಯ 5,366 ಕೋಟಿ ರೂ!

ರೈಲ್ವೆಯಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಿದ ನಂತರ ಅದನ್ನು ರದ್ದುಪಡಿಸಿದರೆ ರೈಲ್ವೆ ಇಲಾಖೆ ನಿಗದಿತ ಮೊತ್ತ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಚೆನ್ನೈ: ರೈಲ್ವೆಯಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಿದ ನಂತರ ಅದನ್ನು ರದ್ದುಪಡಿಸಿದರೆ ರೈಲ್ವೆ ಇಲಾಖೆ ನಿಗದಿತ ಮೊತ್ತ ದಂಡ ಹಾಕುತ್ತದೆ. ಈ ನಿಯಮ 2015ರ ನವೆಂಬರ್ ನಿಂದಲೇ ಜಾರಿಯಲ್ಲಿದೆ. ಹಾಗಾದರೆ ಬುಕ್ಕಿಂಗ್ ಟಿಕೆಟ್ ರದ್ದತಿಯಿಂದ ಹಾಕಿರುವ ದಂಡದಿಂದ ಇದುವರೆಗೆ ಬಂದಿರುವ ಮೊತ್ತ ಎಷ್ಟಿರಬಹುದು ಎಂದು ಅಂದಾಜಿಸಬಹುದೇ?
ಭಾರತೀಯ ರೈಲ್ವೆ ಇಲಾಖೆಯ ಅಂಕಿಅಂಶ ಪ್ರಕಾರ ಮಾರ್ಚ್ 2019ರವರೆಗೆ ಬಂದಿರುವ ಮೊತ್ತ 5 ಸಾವಿರದ 366.53 ಕೋಟಿ ರೂಪಾಯಿ. ಮಾಹಿತಿ ಹಕ್ಕು ಕಾಯ್ದೆಯಿಂದ ಸಿಕ್ಕಿರುವ ಮಾಹಿತಿ ಪ್ರಕಾರ ಬುಕ್ಕಿಂಗ್ ಟಿಕೆಟ್ ರದ್ದುಪಡಿಸಿರುವುದರಿಂದ ಇಲಾಖೆಗೆ ಬಂದಿರುವ ಆದಾಯ ಕಳೆದ ವರ್ಷಕ್ಕಿಂತ 2018-19ರಲ್ಲಿ 646.54 ಕೋಟಿ ರೂಪಾಯಿ ಹೆಚ್ಚಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com