ಕಪ್ಪು ಹಣ ಕಾಯ್ದೆ ಪೂರ್ವಾನ್ವಯ ಗೊಳಿಸಲಾಗದು ಎಂಬ ದೆಹಲಿ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ

2016ರ ಕಪ್ಪು ಹಣ ಕಾಯ್ದೆಯನ್ನು 2015ರ ಜುಲೈ ಯಿಂದ ಪೂರ್ವಾನ್ವಯ ಗೊಳಿಸಲಾಗದು ಎಂಬ ದೆಹಲಿ ಹೈಕೋರ್ಟ್ ಆದೇಶಕ್ಕೆ ಮಂಗಳವಾರ...

Published: 21st May 2019 12:00 PM  |   Last Updated: 21st May 2019 02:58 AM   |  A+A-


SC stays Delhi HC order disallowing black money law to operate retrospectively

ಸುಪ್ರೀಂ ಕೋರ್ಟ್

Posted By : LSB LSB
Source : PTI
ನವದೆಹಲಿ: 2016ರ ಕಪ್ಪು ಹಣ ಕಾಯ್ದೆಯನ್ನು 2015ರ ಜುಲೈ ಯಿಂದ ಪೂರ್ವಾನ್ವಯ ಗೊಳಿಸಲಾಗದು ಎಂಬ ದೆಹಲಿ ಹೈಕೋರ್ಟ್ ಆದೇಶಕ್ಕೆ ಮಂಗಳವಾರ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.

ನ್ಯಾಯಮೂರ್ತಿ ಅರುಣ್‌ ಮಿಶ್ರಾ ನೇತೃತ್ವದ ರಜಾ ಕಾಲದ ಪೀಠ, ವಿವಿಐಪಿ ಹೆಲಿಕಾಪ್ಟರ್‌ ಹಗರಣದ ಆರೋಪಿ ಗೌತಮ್‌ ಖೈತಾನ್‌ ವಿರುದ್ಧ ಕಪ್ಪು ಹಣ ಕೇಸನ್ನು ದಾಖಲಿಸಲಾಗಿದ್ದು, ಆತನ ವಿರುದ್ದದ ಐಟಿ ಅಧಿಕಾರಿಗಳ ಕಾನೂನು ಕ್ರಮಕ್ಕೂ ತಡೆ ನೀಡಿದೆ.

ಇದೇ ವೇಳೆ ಆರೋಪಿ ಗೌತಮ್ ಖೈತಾನ್‌ ಗೆ ನೊಟೀಸ್‌ ಜಾರಿ ಮಾಡಿರುವ ಸುಪ್ರೀಂ ಕೋರ್ಟ್‌, ಸರ್ಕಾರದ ಮನವಿಗೆ ಆರು ವಾರಗಳ ಒಳಗೆ ಉತ್ತರಿಸುವಂತೆ ಸೂಚಿಸಿದೆ.

ಕಪ್ಪು ಹಣ ಹೊಂದಿರುವವರ ವಿರುದ್ಧ ಪ್ರಕರಣ ದಾಖಲಿಸುವುದು ಮತ್ತು ತನಿಖೆ ನಡೆಸಲು ಅವಕಾಶ ನೀಡುವ 2016ರ ಕಪ್ಪು ಹಣ ಕಾಯ್ದೆಯನ್ನು 2015ರ ಜುಲೈನಿಂದ ಪೂರ್ವಾನ್ವಯವಾಗುವಂತೆ ಜಾರಿಗೊಳಿಸಲು ಕೇಂದ್ರ ಸರ್ಕಾರ ಹೊರಡಿಸಿದ್ದ ಆಧಿಸೂಚನೆಗೆ ದೆಹಲಿ ಹೈಕೋರ್ಟ್ ತಡೆ ನೀಡಿತ್ತು.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp