ಉಗ್ರರ ದಮನಕ್ಕೆ ಬ್ರಹ್ಮಾಸ್ತ್ರ: ರಿಸ್ಯಾಟ್-2ಬಿ ರೇಡಾರ್ ಇಮೇಜಿಂಗ್ ಉಪಗ್ರಹ ಉಡಾವಣೆ ಯಶಸ್ವಿ!

ಗಡಿಯಲ್ಲಿ ಉಗ್ರರ ಕಾರ್ಯ ಚಟುವಟಿಕೆ ಸೇರಿದಂತೆ ಭೂಮಿಯ ಮೇಲೆ ನಿಗಾ ಇಡುವ ರೇಡಾರ್ ಇಮೇಜಿಂಗ್ ಪರಿವೀಕ್ಷಕ ಉಪಗ್ರಹ ರಿಸ್ಯಾಟ್-2ಬಿಯನ್ನು ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಶ್ರೀಹರಿಕೋಟ: ಗಡಿಯಲ್ಲಿ ಉಗ್ರರ ಕಾರ್ಯ ಚಟುವಟಿಕೆ ಸೇರಿದಂತೆ ಭೂಮಿಯ ಮೇಲೆ ನಿಗಾ ಇಡುವ ರೇಡಾರ್ ಇಮೇಜಿಂಗ್ ಪರಿವೀಕ್ಷಕ ಉಪಗ್ರಹ ರಿಸ್ಯಾಟ್-2ಬಿಯನ್ನು ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಬುಧವಾರ ಬೆಳಗ್ಗೆ 5.30ರ ಸುಮಾರಿಗೆ ಪಿಎಸ್‌ಎಲ್‌ವಿ-ಸಿ46 ರಾಕೆಟ್ ರಿಸ್ಯಾಟ್-2ಬಿ ಹೊತ್ತ ಉಡಾವಣೆಯಾಗಿದ್ದು ಯಶಸ್ವಿಯಾಗಿ ಕಕ್ಷೆ ಸೇರಿದೆ.
ಬಾಹ್ಯಾಕಾಶದಿಂದ ಭಾರತದ ಮೇಲೆ ನಿಗಾ ಇರಿಸಬಲ್ಲ ಸಾಮರ್ಥ್ಯದ ಆರ್ಐಎಸ್ಎಟಿ(ರಿಸ್ಯಾಟ್-2ಬಿ) 615 ಕೆಜಿ ತೂಕ ಹೊಂದಿದೆ. ಕೃಷಿ, ಅರಣ್ಯ ಪ್ರದೇಶ ಸಂರಕ್ಷಣೆ ಮತ್ತು ನೈಸರ್ಗಿಕ ವಿಕೋಪ ನಿರ್ವಹಣೆಗೆ ರಿಸ್ಯಾಟ್ ಸಹಕಾರಿಯಾಗಲಿದೆ. ಇನ್ನು ಉಡಾವಣೆಯಾದ 15 ನಿಮಿಷಗಳಲ್ಲಿ ರಿಸ್ಯಾಟ್-2ಬಿ ಉಪಗ್ರಹವು ಕಕ್ಷೆ ಸೇರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com