ಪ್ರಧಾನಿ ಮೋದಿಯನ್ನು 'ಕಳ್ಳ' ಎಂದು ಕರೆದದ್ದು ತಪ್ಪು: ನಿತಿನ್ ಗಡ್ಕರಿ

ಪ್ರಧಾನಿ ನರೇಂದ್ರ ಮೋದಿ ಅವರನ್ನು 'ಕಳ್ಳ' ಎಂದು ಕರೆದದ್ದು ತಪ್ಪು. ಏಕೆಂದರೆ ಪ್ರಧಾನಿ ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ಅವರು ಇಡೀ ದೇಶದ ಪ್ರಧಾನಿಯಾಗಿರುತ್ತಾರೆ...

Published: 23rd May 2019 12:00 PM  |   Last Updated: 23rd May 2019 09:46 AM   |  A+A-


Calling Narendra Modi 'thief' was wrong: Nitin Gadkari

ನಿತಿನ್ ಗಡ್ಕರಿ

Posted By : LSB LSB
Source : IANS
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು 'ಕಳ್ಳ' ಎಂದು ಕರೆದದ್ದು ತಪ್ಪು. ಏಕೆಂದರೆ ಪ್ರಧಾನಿ ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ಅವರು ಇಡೀ ದೇಶದ ಪ್ರಧಾನಿಯಾಗಿರುತ್ತಾರೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಗುರುವಾರ ಹೇಳಿದ್ದಾರೆ.

2019ರ ಲೋಕಸಭೆ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, ಎನ್ ಡಿಎ ಸ್ಪಷ್ಟ ಬಹುಮತ ಪಡೆದಿದ್ದು, ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಗಡ್ಕರಿ, ದೇಶದ ಜನತೆ ಪ್ರಧಾನಿ ಮೋದಿ ನಾಯಕತ್ವದ ಮೇಲೆ ವಿಶ್ವಾಸವಿಟ್ಟು ಮತ ಹಾಕಿದ್ದಾರೆ ಎಂದರು.

ದೇಶದ ಜನತೆಗೆ ಯಾರು ಉತ್ತಮರು ಎಂದು ಗೊತ್ತಿದೆ. ಮೋದಿ ಆಡಳಿತದ ತಮಗೆ ವಿಶ್ವಾಸವಿದೆ ಎಂಬುದು ಜನ ಈ ಚುನಾವಣೆಯಲ್ಲಿ ಸಾಬೀತು ಮಾಡಿದ್ದಾರೆ. ಬಿಜೆಪಿಯ ಗೆಲುವು ಜನರ ಆಯ್ಕೆ ಎಂದು ಗಡ್ಕಿರಿ ಅವರು ಹೇಳಿದ್ದಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp