ಬಿಜೆಪಿ ಗೆಲುವು ದೇಶ ರಕ್ಷಣೆ ಮಾಡುವ ಶಕ್ತಿಗಳ ಗೆಲುವು ಎಂದು ಬಣ್ಣಿಸಿದ ಆರ್ ಎಸ್ಎಸ್

ಬಿಜೆಪಿಯ ಭರ್ಜರಿ ಗೆಲುವನ್ನು ವಿಭಿನ್ನವಾಗಿ ಬಣ್ಣಿಸಿರುವ ಅದರ ಮಾತೃ ಸಂಸ್ಥೆ ಆರ್ ಎಸ್ಎಸ್, ದೇಶದಲ್ಲಿ ಮತ್ತೊಮ್ಮೆ ಸುಭದ್ರ ಸರ್ಕಾರ ಬಂದಿದೆ....

Published: 23rd May 2019 12:00 PM  |   Last Updated: 23rd May 2019 10:18 AM   |  A+A-


RSS describes BJP's win as victory of national forces

ಭಯ್ಯಾಜಿ ಜೋಷಿ

Posted By : LSB LSB
Source : PTI
ಬೆಂಗಳೂರು: ಬಿಜೆಪಿಯ ಭರ್ಜರಿ ಗೆಲುವನ್ನು ವಿಭಿನ್ನವಾಗಿ ಬಣ್ಣಿಸಿರುವ ಅದರ ಮಾತೃ ಸಂಸ್ಥೆ ಆರ್ ಎಸ್ಎಸ್, ದೇಶದಲ್ಲಿ ಮತ್ತೊಮ್ಮೆ ಸುಭದ್ರ ಸರ್ಕಾರ ಬಂದಿದೆ. ಮತ್ತೊಮ್ಮೆ ಪ್ರಜಾಪ್ರಭುತ್ವಕ್ಕೆ ಜಯವಾಗಿದೆ. ಇದು ದೇಶ ರಕ್ಷಣೆ ಮಾಡುವ ಶಕ್ತಿಗಳ ಗೆಲುವು ಎಂದು ಹೇಳಿದೆ.

ಈ ಪ್ರಜಾಪ್ರಭುತ್ವದ ಗೆಲುವಿಗೆ ಕಾರಣರಾದ ಪ್ರತಿಯೊಬ್ಬರಿಗೂ ಶುಭಾಶಯ ತಿಳಿಸಿದ ಆರ್ ಎಸ್ಎಸ್, ಈ ಫಲಿತಾಂಶ ಪ್ರಜಾಪ್ರಭುತ್ವದ ಆತ್ಮ ಮತ್ತು ಅದರ ತತ್ವಗಳನ್ನು ಜಗತ್ತಿಗೆ ತೋರಿಸಿದ ಎಂದು ಆರ್ ಎಸ್ ಎಸ್ ಸಹಕಾರ್ಯವಾಹಕ ಭಯ್ಯಾಜಿ ಜೋಷಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಹೊಸ ಸರ್ಕಾರ ಸಾಮಾನ್ಯ ಜನರ ಸಮಸ್ಯೆ ಬಗೆ ಹರಿಸಲು ಮುಂದಾಗಬೇಕು.  ಮಾನವೀಯತೆಯ ಗೆಲುವನ್ನು ಇಲ್ಲಿ ಕಾಣಬೇಕಾಗಿದೆ ಎಂದಿದ್ದಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp