ಜಮ್ಮು- ಕಾಶ್ಮೀರ: ಎನ್ ಕೌಂಟರ್ ನಲ್ಲಿ ಉಗ್ರ ಝಕೀರ್ ಮೂಸಾ ಹತ್ಯೆ

ಕಣಿವೆ ರಾಜ್ಯ ಜಮ್ಮು- ಕಾಶ್ಮೀರದ ತ್ರಾಲ್ ಬಳಿಯ ದಾಸ್ರಾ ಬಳಿ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಇಸ್ಲಾಮಿಕ್ ಸ್ಟೇಟ್ ಜಮ್ಮು ಕಾಶ್ಮೀರ ಸಂಘಟನೆಯ ಉಗ್ರ ಝಕೀರ್ ಮೂಸಾವನ್ನು ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಝಕೀರ್ ಮೂಸಾ
ಝಕೀರ್ ಮೂಸಾ

ಶ್ರೀನಗರ: ಕಣಿವೆ ರಾಜ್ಯ ಜಮ್ಮು- ಕಾಶ್ಮೀರದ ತ್ರಾಲ್ ಬಳಿಯ ದಾಸ್ರಾ ಬಳಿ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ  ಇಸ್ಲಾಮಿಕ್ ಸ್ಟೇಟ್ ಜಮ್ಮು ಕಾಶ್ಮೀರ  ಸಂಘಟನೆಯ ಉಗ್ರ ಝಕೀರ್ ಮೂಸಾನನ್ನು ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಐಸಿಸ್ ನಿಂದ ಪ್ರಭಾವಿತನಾಗಿದ್ದ ಈತ 2017ರಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಸೇರಿದ್ದ. ನಂತರ ಮುಜಾಹಿದ್ದೀನ್ ಸಂಘಟನೆ ತೊರೆದು ತನ್ನದೆ ಆದ ಐಎಸ್ ಜೆಕೆ ಸಂಘಟನೆ ಹುಟ್ಟುಹಾಕಿ ಬಂಡುಕೋರ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಮತ್ತೋರ್ವ ಬಂಡುಕೋರ ಬುರ್ಹಾನ್ ವಾನಿಯನ್ನು ಭಾರತೀಯ ಸೇನಾ ಪಡೆ ಹತ್ಯೆ ಮಾಡಿದ ಬಳಿಕ ತನ್ನ ಕಾರ್ಯ ಚಟುವಟಿಕೆಗಳನ್ನು ತೀವ್ರಗೊಳಿಸಿದ್ದ.

ಎನ್ ಕೌಂಟರ್ ಸ್ಥಳದಲ್ಲಿದ್ದ ಸ್ಪೋಟಕಗಳು ಹಾಗೂ ಗನ್ ಗಳನ್ನು ವಶಕ್ಕೆ ಪಡೆಯಲಾಗಿದೆ  ಎಂದು ರಕ್ಷಣಾ ಇಲಾಖೆಯ ವಕ್ತಾರ ರಾಜೇಶ್ ಕೈಲಾ ಮಾಹಿತಿ ನೀಡಿದ್ದಾರೆ.

ದಾಸಾ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಸೇನೆ, ಜಮ್ಮು- ಕಾಶ್ಮೀರ ಪೊಲೀಸರ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿದೆ. ಈ ವೇಳೆ ಶರಣಾಗುವಂತೆ ಸೂಚನೆ ನೀಡಿದ್ದರೂ ಸೇನೆ ಮೇಲೆ ಗುಂಡಿನ ದಾಳಿ ನಡೆಸಿದ್ದು, ಪ್ರತಿಯಾಗಿ ಯೋಧರು ನಡೆಸಿದ ದಾಳಿಯಲ್ಲಿ ಝಕೀರ್ ಸಾವನ್ನಪ್ಪಿದ್ದಾನೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com