ನಾಗಾಲ್ಯಾಂಡ್‌ ನಲ್ಲಿ ಉಗ್ರ ದಾಳಿ: ಇಬ್ಬರು ಯೋಧರು ಹುತಾತ್ಮ

ನಾಗಾಲ್ಯಾಂಡ್‌ ನಲ್ಲಿ ಶನಿವಾರ ಸೇನೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಅಸ್ಸಾಂ ರೈಫಲ್ಸ್ ಯೋಧರು ಹುತಾತ್ಮರಾಗಿದ್ದು,...

Published: 25th May 2019 12:00 PM  |   Last Updated: 25th May 2019 10:16 AM   |  A+A-


Two Assam Rifles jawans killed, three injured in ambush by militants in Nagaland

ಗಾಯಾಳು ಯೋಧನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರುವುದು

Posted By : LSB LSB
Source : The New Indian Express
ಗುವಾಹತಿ: ನಾಗಾಲ್ಯಾಂಡ್‌ ನಲ್ಲಿ ಶನಿವಾರ ಸೇನೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಅಸ್ಸಾಂ ರೈಫಲ್ಸ್ ಯೋಧರು ಹುತಾತ್ಮರಾಗಿದ್ದು, ಮೂವರು ಗಾಯಗೊಂಡಿದ್ದಾರೆ.

ಅಧಿಕೃತ ಮೂಲಗಳ ಪ್ರಕಾರ, ಭಾರತ-ಮ್ಯಾನ್‌ಮಾರ್‌ ಗಡಿಗೆ ತಾಗಿಕೊಂಡಿರುವ ಮೋನ್‌ ಪ್ರದೇಶದಲ್ಲಿ ಬಂಡುಕೋರರ ಸಮೂಹದೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ.

ಇಂದು ಮಧ್ಯಾಹ್ನ ಅಸ್ಸಾಂ ರೈಫ‌ಲ್‌ ಪಡೆಯ ಯೋಧರು ತೆರಳುತ್ತಿದ್ದ ಎರಡು ವಾಹನಗಳನ್ನು ಉಗ್ರರು ಐಇಡಿ ಬಳಸಿ ಸ್ಫೋಟಿಸಿದ್ದು, ಸ್ಫೋಟದ ಬಳಿಕ ಯೋಧರ ಮತ್ತು ಬಂಡುಕೋರರ ನಡುವೆ ಗುಂಡಿನ ಕಾಳಗ ನಡೆಯಿತು. ಇದರಲ್ಲಿ ಇಬ್ಬರು ಜವಾನರು ಹುತಾತ್ಮರಾಗಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.

ಇದುವರೆಗೂ ಈ ದಾಳಿಯ ಹೊಣೆಯನ್ನು ಯಾವ ಉಗ್ರ ಸಂಘಟನೆಯೂ ಹೊತ್ತುಕೊಂಡಿಲ್ಲ. ಆದರೆ ದಾಳಿಗೆ ಎನ್ಎಸ್ ಸಿಎನ್(ಐಎಂ) ಸಂಘಟನೆಯೇ ಕಾರಣ ಎಂದು ಶಂಕಿಸಲಾಗಿದೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp