ಆಂಧ್ರದ ಶೇ.32 ರಷ್ಟು ಶಾಸಕರಿಗೆ ಕ್ರಿಮಿನಲ್ ಹಿನ್ನೆಲೆ: ಎಡಿಆರ್

ಆಂಧ್ರದಲ್ಲಿ ಆರಿಸಿಬಂದಿರುವ ಒಟ್ಟಾರೆ ಶಾಸಕರ ಪೈಕಿ ಶೇ.32 ರಷ್ಟು ಶಾಸಕರು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾರೆ ಎಂದು ಎಡಿಆರ್ ಸಮೀಕ್ಷೆ ಮೂಲಕ ತಿಳಿದುಬಂದಿದೆ.
32% MLAs in Andhra have serious criminal cases: ADR
32% MLAs in Andhra have serious criminal cases: ADR
ನವದೆಹಲಿ: ಆಂಧ್ರದಲ್ಲಿ ಆರಿಸಿಬಂದಿರುವ ಒಟ್ಟಾರೆ ಶಾಸಕರ ಪೈಕಿ ಶೇ.32 ರಷ್ಟು ಶಾಸಕರು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾರೆ ಎಂದು ಎಡಿಆರ್ ಸಮೀಕ್ಷೆ ಮೂಲಕ ತಿಳಿದುಬಂದಿದೆ. 
174 ರ ಶಾಸಕರು ಆಂಧ್ರಪ್ರದೇಶದ ವಿಧಾನಸಭೆಗೆ ಆಯ್ಕೆಗೊಂಡಿದ್ದು ಈ ಪೈಕಿ 151 ಶಾಸಕರು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾರೆ. ಈ ಪೈಕಿ 8 ಶಾಸಕರು ಅಪರಾಧಿಗಳೆಂದು ತೀರ್ಪು ಪ್ರಕಟವಾಗಿದೆ. 
ವೈಆರ್ ಎಸ್ ಕಾಂಗ್ರೆಸ್ ನ ಶಾಸಕ ರಾಮಕೃಷ್ಣ ರೆಡ್ಡಿ ಪಿನ್ನೆಲಿ ತನ್ನ ವಿರುದ್ಧ ಕೊಲೆ ಪ್ರಕರಣ ಇರುವುದನ್ನು ಘೋಷಿಸಿಕೊಂಡಿದ್ದಾರೆ. ಇನ್ನು 10 ಜನ ಶಾಸಕರು ಕೊಲೆ ಯತ್ನದ ಪ್ರಕರಣವಿರುವುದನ್ನು ಘೋಷಿಸಿದ್ದಾರೆ. 6 ಶಾಸಕರ ವಿರುದ್ಧ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ದಾಖಲಾಗಿದೆ.
ವೈಎಸ್ ಆರ್ ಪಿಯ  23 ಶಾಸಕರ ಪೈಕಿ  4 ಶಾಸಕರ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, ಟಿಡಿಪಿಯ 23 ಶಾಸಕರ ಪೈಕಿ ಓರ್ವ ಹಾಗೂ ಜನಸೇನಾ ಪಕ್ಷದ ಓರ್ವ ಶಾಸಕನ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com