ವಿಚಿತ್ರ ಆದರೂ ನಿಜ: ನವವಧುವಿಗೆ ವರನ ಸಹೋದರಿ ತಾಳಿ ಕಟ್ಟಿ ವರಿಸುತ್ತಾಳೆ, ವರ ಸಿಂಗಾರಗೊಂಡು ಮನೆಯಲ್ಲಿರುತ್ತಾನೆ!

ಭಾರತದಲ್ಲಿನ ಕೆಲವೊಂದು ವಿಚಿತ್ರ ಪದ್ದಿತಿಗಳು ಕೆಲವೊಮ್ಮೆ ಸುದ್ದಿಯಾಗುತ್ತದೆ. ಅದೇ ರೀತಿ ಬುಡಕಟ್ಟು ಜನಾಂಗದ ಗ್ರಾಮದಲ್ಲಿ ವಿಶೇಷವಾದ ಸಂಪ್ರದಾಯವೊಂದಿದ್ದು ಇಲ್ಲಿ ಮದುವೆಗೂ ಮುನ್ನ...

Published: 26th May 2019 12:00 PM  |   Last Updated: 26th May 2019 06:14 AM   |  A+A-


ಸಂಗ್ರಹ ಚಿತ್ರ

Posted By : VS VS
Source : ANI
ಚೋಟಾ ಉದೇಪುರ್(ಗುಜರಾತ್): ಭಾರತದಲ್ಲಿನ ಕೆಲವೊಂದು ವಿಚಿತ್ರ ಪದ್ದಿತಿಗಳು ಕೆಲವೊಮ್ಮೆ ಸುದ್ದಿಯಾಗುತ್ತದೆ. ಅದೇ ರೀತಿ ಬುಡಕಟ್ಟು ಜನಾಂಗದ ಗ್ರಾಮದಲ್ಲಿ ವಿಶೇಷವಾದ ಸಂಪ್ರದಾಯವೊಂದಿದ್ದು ಇಲ್ಲಿ ವರನ ಸಹೋದರಿ ವಧುವಿಗೆ ತಾಳಿ ಕಟ್ಟಿ ವರಿಸುತ್ತಾಳೆ. ವರ ಸಂಪೂರ್ಣವಾಗಿ ಸಿಂಗಾರಗೊಂಡು ಮನೆಯಲ್ಲಿರುತ್ತಾನೆ.

ಸುರ್ ಖೇದಾ, ಸನಾದ ಮತ್ತು ಅಂಬಾಲ್ ಎಂಬ ಬುಡಕಟ್ಟು ಜನಾಂಗದ ಗ್ರಾಮಗಳಲ್ಲಿನ ಮದುವೆಗಳಲ್ಲಿ ಮದುಮಗ ಭಾಗಿಯಾಗುವುದಿಲ್ಲ. ಆತನ ಬದಲು ಅವಿವಾಹಿತೆಯಾಗಿರುವ ಸಹೋದರಿ ಅಥವಾ ಸಂಬಂಧಿಕರ ಹುಡುಗಿಯನ್ನು ವಧುವನ್ನು ವರಿಸುತ್ತಾಳೆ.

ಇಲ್ಲಿನ ಬುಡಕಟ್ಟು ಜನಾಂಗದವರು ಈ ಊರಿನ ದೇವರುಗಳು ಅವಿವಾಹಿತರು ಎಂಬ ನಂಬುತ್ತಾರೆ. ಈ ಅವಿವಾಹಿತ ದೇವರುಗಳಿಗೆ ಗೌರವ ಸಲ್ಲಿಸುವ ಸಲುವಾಗಿ ವರನು ತನ್ನ ಮದುವೆಯಲ್ಲಿ ಭಾಗಿಯಾಗುವುದಿಲ್ಲ. ಮದುಮಗನಿಗೆ ಯಾವುದೇ ದೋಷ ತಟ್ಟದಂತೆ ಆತನನ್ನು ಸಿಂಗರಿಸಿ ಮನೆಯಲ್ಲಿಯೇ ಕೂರಿಸಲಾಗುತ್ತದೆ.

ಇಲ್ಲಿನ ಮದುವೆಗಳಲ್ಲಿ ವರ ಮಾಡುವ ಎಲ್ಲ ಕಾರ್ಯಗಳನ್ನು ಆತನ ಸಹೋದರಿಯೇ ನಿರ್ವಹಿಸುತ್ತಾಳೆ. ಮಾಂಗಲ್ಯಧಾರಣೆ, ಸಪ್ತಪದಿ ಎಲ್ಲವೂ ಇಲ್ಲಿ ನಡೆಯುತ್ತದೆ ಅಂತಾರೆ ಸುರ್ ಖೇದ ಗ್ರಾಮದ ನಿವಾಸಿಗಳು.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp