2020ಕ್ಕೆ ಆಮ್ ಆದ್ಮಿ ಪಾರ್ಟಿ ತೊರೆಯುತ್ತೇನೆ; ಶಾಸಕಿ ಅಲ್ಕಾ ಲಂಬಾ

ಆಮ್ ಆದ್ಮಿ ಪಕ್ಷವನ್ನು ಮುಂದಿನ ವರ್ಷ ತೊರೆಯುವುದಾಗಿ ಅತೃಪ್ತ ಶಾಸಕಿ ಅಲ್ಕಾ ಬಾ ಘೋಷಿಸಿದ್ದಾರೆ...

Published: 26th May 2019 12:00 PM  |   Last Updated: 26th May 2019 02:11 AM   |  A+A-


MLA Alka Lamba

ಶಾಸಕಿ ಅಲ್ಕಾ ಲಂಬಾ

Posted By : SUD SUD
Source : Online Desk
ನವದೆಹಲಿ: ಆಮ್ ಆದ್ಮಿ ಪಕ್ಷವನ್ನು ಮುಂದಿನ ವರ್ಷ ತೊರೆಯುವುದಾಗಿ ಅತೃಪ್ತ ಶಾಸಕಿ ಅಲ್ಕಾ ಬಾ ಘೋಷಿಸಿದ್ದಾರೆ.

2013ರಲ್ಲಿ ನಿಮ್ಮ ಜೊತೆ ನನ್ನ ಪ್ರಯಾಣ ಆರಂಭವಾಗಿತ್ತು, ಅದು 2020ರಲ್ಲಿ ಕೊನೆಯಾಗಲಿದೆ. ಪಕ್ಷದ ನಿಷ್ಠಾವಂತ ಕ್ರಾಂತಿಕಾರಿ ತಳಮಟ್ಟದ ಕಾರ್ಯಕರ್ತರಿಗೆ ನನ್ನ ಶುಭ ಹಾರೈಕೆಗಳು ಯಾವತ್ತೂ ಇರುತ್ತದೆ, ದೆಹಲಿಯ ಗಟ್ಟಿ ಬದಲಾವಣೆಗೆ ನೀವು ಯಾವತ್ತೂ ಇರುತ್ತೀರೆಂದು ಭಾವಿಸುತ್ತೇನೆ. ಕಳೆದ ಆರು ವರ್ಷಗಳು ನಿಜಕ್ಕೂ ಮರೆಯಲಾರದ ಅನುಭವವನ್ನು ಕೊಟ್ಟಿದೆ, ನಾನು ಸಾಕಷ್ಟು ನಿಮ್ಮಿಂದ ಕಲಿತಿದ್ದೇನೆ ಎಂದು ದೆಹಲಿಯ ಚಾಂದಿನಿ ಚೌಕ್ ಶಾಸಕಿಯಾಗಿರುವ ಅಲ್ಕಾ ಲಂಬಾ ಟ್ವೀಟ್ ಮಾಡಿದ್ದಾರೆ.

ಮುಂದಿನ ವರ್ಷ ದೆಹಲಿ ವಿಧಾನಸಭೆ ಚುನಾವಣೆಯಿದ್ದು ಅದಕ್ಕೆ ಮುನ್ನ ಪಕ್ಷ ತೊರೆಯಲಿದ್ದಾರೆಯೇ ಅಥವಾ ನಂತರ ತೊರೆಯಲಿದ್ದಾರೆಯೇ ಎಂಬ ಬಗ್ಗೆ ಹೇಳಲಿಲ್ಲ. ಕಳೆದ ಕೆಲ ದಿನಗಳಿಂದ ಅಲ್ಕ ಲಂಬಾ ಅಸಮಾಧಾನ ಮತ್ತು ಭಿನ್ನಮತೀಯ ನಿಲುವಿನಿಂದ ಸುದ್ದಿಯಾಗಿದ್ದರು.

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಹೀನಾಯ ಸೋಲಿಗೆ ನಿಖರ ಕಾರಣವೇನೆಂದು ತಿಳಿಸಬೇಕೆಂದು ಕೇಳಿದ ನಂತರ ಪಕ್ಷದ ಶಾಸಕರ ಅಧಿಕೃತ ವಾಟ್ಸಾಪ್ ಗ್ರೂಪ್ ನಿಂದ ಅಲ್ಕಾ ಲಂಬಾ ಅವರನ್ನು ತೆಗೆದುಹಾಕಲಾಗಿತ್ತು.
Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp