2020ಕ್ಕೆ ರಾಜ್ಯಸಭೆಯಲ್ಲೂ ಬಹುಮತ ಸಾಧಿಸಲು ಬಿಜೆಪಿ ತಂತ್ರ

ಲೋಕಸಭಾ ಚುನಾವಣೆಯಲ್ಲಿ ಭಾರಿ ಬಹುಮತ ಪಡೆದು ಬೀಗುತ್ತಿರುವ ಬಿಜೆಪಿ ಮುಂದಿನ ವರ್ಷದ ವೇಳೆಗೆ ರಾಜ್ಯಸಭೆಯಲ್ಲೂ ತನ್ನ ಸಂಖ್ಯಾಬಲವನ್ನು ಹೆಚ್ಚಿಸಿಕೊಳ್ಳುವ ಕಡೆಗೆ ಗಮನಹರಿಸಿದೆ.
ರಾಜ್ಯಸಭೆ
ರಾಜ್ಯಸಭೆ

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಭಾರಿ ಬಹುಮತ ಪಡೆದು ಬೀಗುತ್ತಿರುವ ಬಿಜೆಪಿ ಮುಂದಿನ ವರ್ಷದ ವೇಳೆಗೆ  ರಾಜ್ಯಸಭೆಯಲ್ಲೂ ತನ್ನ ಸಂಖ್ಯಾಬಲವನ್ನು  ಹೆಚ್ಚಿಸಿಕೊಳ್ಳುವ ಕಡೆಗೆ ಗಮನಹರಿಸಿದೆ.  

2020 ರ ಅಂತ್ಯದ ವೇಳೆಗೆ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಿಂದ ಆಡಳಿತ ಪಕ್ಷವು 19 ಸ್ಥಾನಗಳನ್ನು ಪಡೆಯಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಉತ್ತರ ಪ್ರದೇಶದಿಂದ ಗರಿಷ್ಠ ಸ್ಥಾನಗಳು ಬರಲಿವೆ ಇದರ ಜೊತೆಗೆ ಗುಜರಾತ್ ಮತ್ತು ಮಧ್ಯಪ್ರದೇಶದಿಂದಲೂ ಅನೇಕ ಸ್ಥಾನ ಪಡೆಯಲಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕಳೆದ 15 ವರ್ಷಗಳಲ್ಲಿ, ಯಾವುದೇ ಆಡಳಿತಾತ್ಮಕ ಒಕ್ಕೂಟವು ರಾಜ್ಯಸಭೆಯಲ್ಲಿ 123 (ಒಟ್ಟು ಶಾಸನ ಶೇಕಡ 50 ರಷ್ಟು) ದಾಟಿಲ್ಲ ಎಂಬುದು ಪ್ರಮುಖ ಸಂಗತಿಯಾಗಿದೆ.

ಎಲ್ಲವೂ ಈಗ ಎನ್ ಡಿಎ ನಾಯಕರ ನಿರೀಕ್ಷೆಯಂತೆ ನಡೆದರೆ ರಾಜ್ಯಸಭೆಯಲ್ಲಿ ಎನ್ ಡಿಎ 125 ಸ್ಥಾನಗಳನ್ನು ದಾಟಲಿದೆ ಎಂದು ಹೇಳಲಾಗುತ್ತಿದೆ.

ಬಿಜೆಪಿ ಮತ್ತು ಎನ್ ಡಿಎ 100 ಸದಸ್ಯರನ್ನು ಮೀರಿವೆ. ಎನ್ ಡಿಎ ಪಕ್ಷಗಳಲ್ಲದೆ ನಾಮನಿರ್ದೇಶಿತ ಸದಸ್ಯರಾದ  ಮೇರಿ ಕೋಮ್ ಮತ್ತು ಸ್ವಪಾನ್ ದಾಸ್ ಗುಪ್ತ ಯರನ್ನು ಸೇರಿಸಿದರೆ ಎನ್ ಡಿ ಎ ಬಲ 106ಕ್ಕೆ ಮುಟ್ಟಲಿದೆ.

ಬಿಜೆಪಿ ಮುಖ್ಯಸ್ಥ ಅಮಿತ್ ಶಾ ಅವರು ಲೋಕಸಭೆ ಚುನಾವಣೆಯ ನಂತರ ರಾಜ್ಯಸಭೆಯಲ್ಲಿ ಬಲವನ್ನು ಹೆಚ್ಚಿಕೊಳ್ಳುವ ಕಡೆಗೆ ಗಮನ ಹರಿಸಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ

ತ್ರಿವಳಿ  ತಲಾಕ್, ನಾಗರಿಕ ತಿದ್ದುಪಡಿ ಮಸೂದೆ ಮತ್ತು ಹೊಸ ಮೋಟಾರು ವಾಹನ ಕಾಯಿದೆ ಮಸೂದೆ ಅಂಗೀಕಾರಕ್ಕೆ ಸಂಖ್ಯಾಬಲದ ಕೊರತೆಯಿಂದ ಸಾಧ್ಯವಾಗಿರಲಿಲ್ಲ, ಈ ಹಿನ್ನಲೆಯಲ್ಲಿ ಬಲವನ್ನು ರಾಜ್ಯಸಭೆಯಲ್ಲಿ ಹೆಚ್ಚಿಸಿಕೊಳ್ಳಲು ಬಿಜೆಪಿ ನಾಯಕರು ಇರುವ ದಾರಿಯನ್ನು ಹುಡುಕುತ್ತಿದ್ದಾರೆ.

2014-18ರ ಅವಧಿಯಲ್ಲಿ ಮೊದಲ ನಾಲ್ಕು ವರ್ಷಗಳಲ್ಲಿ ನರೇಂದ್ರ ಮೋದಿ ಅವರ ಸರ್ಕಾರ  ರಾಜ್ಯಸಭೆ ಮಸೂದೆ ಅಂಗೀಕಾರ ವಿಚಾರದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಿತ್ತು.2017 ಮತ್ತು 2018 ರಲ್ಲಿ ಬಿಜೆಪಿ ಸಂಖ್ಯೆಯ ಗಣನೀಯವಾಗಿ ಹೆಚ್ಚಾಗಿ ಎಂ. ವೆಂಕಯ್ಯ ನಾಯ್ಡು ಅವರು ಉಪರಾಷ್ಟ್ರಪತಿಯಾಗಿ ಆಯ್ಕೆಯಾದರು.

ಅಸ್ಸಾಂನಿಂದ ಬಿಜೆಪಿ ಮತ್ತು ಎನ್ ಡಿಎ ಕನಿಷ್ಠ ಮೂರು ಸೀಟುಗಳನ್ನು ಪಡೆಯಬಹುದು ಎಂದು ಹೇಳಿದ್ದು, ಅವುಗಳಲ್ಲಿ ಒಂದು ಸ್ಥಾನವನ್ನು 2019 ರಲ್ಲಿ ಎಲ್ ಜೆ ಪಿಯ ರಾಮ್ ವಿಲಾಸ್ ಪಾಸ್ವಾನ್ ಅವರ ಪಕ್ಷಕ್ಕೆ ನೀಡಲಿದೆ ಬಿಜೆಪಿ ಮೂಲಗಳು ಹೇಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com