ಕಾರ್ಗಿಲ್ ಯೋಧರ ಸ್ಮರಣಾರ್ಥ 'ಮಿಸ್ಸಿಂಗ್ ಮ್ಯಾನ್' ಫಾರ್ಮೇಷನ್, ಐಎಎಫ್ ಚೀಫ್ ಧನೋವಾ ನೇತೃತ್ವ

ಭಾರತೀಯ ವಾಯು ಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಬಿ.ಎಸ್. ಧನೋವಾ ಇಂದು ಮಿಗ್ -21 ಯುದ್ಧ ವಿಮಾನದಲ್ಲಿ ‘ಮಿಸ್ಸಿಂಗ್ ಮ್ಯಾನ್ ಫಾರ್ಮೇಷನ್’ ರಚಿಸುವ ಮೂಲಕ ಕಾರ್ಗಿಲ್ ನ ಸಫೇದ್ ಸಾಗರ್ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಧನೋವಾ
ಧನೋವಾ
ನವದೆಹಲಿ: ಭಾರತೀಯ ವಾಯು ಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್  ಬಿ.ಎಸ್. ಧನೋವಾ ಅವರ ಇಂದು ಇಲ್ಲಿನ ಭಿಸಿಯಾನ ವಾಯುನೆಲೆಯಲ್ಲಿ ಮಿಗ್ -21 ಯುದ್ಧ ವಿಮಾನದಲ್ಲಿ ‘ಮಿಸ್ಸಿಂಗ್ ಮ್ಯಾನ್ ಫಾರ್ಮೇಷನ್’  ರಚಿಸುವ ಮೂಲಕ  ಕಾರ್ಗಿಲ್ ನ ಸಫೇದ್ ಸಾಗರ್ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಪಶ್ಚಿಮ ಏರ್ ಕಮಾಂಡಿಂಗ್ ಇನ್ ಚೀಫ್ ಆರ್. ನಂಬಿಯಾರ್ ಈ ಕಸರತ್ತಿನ ಭಾಗವಾಗಿದ್ದರು. ಮಿಸ್ಸಿಂಗ್ ಮ್ಯಾನ್ ಫಾರ್ಮೇಷನ್, ಶಸ್ತ್ರಸಜ್ಜಿತರಾಗಿ ಹುತಾತ್ಮರಾದ ವೀರ ಯೋಧರಿಗೆ ನೀಡುವ ವೈಮಾನಿಕ ಶ್ರದ್ಧಾಂಜಲಿಯಾಗಿದೆ. ಇದರಲ್ಲಿ ಎರಡು ಯುದ‍್ದ ವಿಮಾನಗಳು ಆಗಸದಲ್ಲಿ ಹಾರಾಡಿ ಬಾಣದ ರೂಪ ಮೂಡಿಸುತ್ತವೆ. ಈ ಕಸರತ್ತಿಗೆ ಅಗತ್ಯವಿರುವ ಮೂರನೇ ಯುದ್ಧ ವಿಮಾನದ ಅನುಪಸ್ಥಿತಿಯೇ ‘ಮಿಸ್ಸಿಂಗ್  ಮ್ಯಾನ್’ ಫಾರ್ಮೇಷನ್ .
ಈ ಕಸರತ್ತಿನ ನಂತರ, ಧನೋವಾ ಅವರು ಕರ್ತವ್ಯದಲ್ಲಿದ್ದಾಗ ಪ್ರಾಣ ತ್ಯಾಗ ಮಾಡಿದ ಭಾರತೀಯ ವಾಯುಪಡೆಯ ಧೀರರ ಸ್ಮಾರಕಗಳಿಗೆ ಪುಷ್ಪನಮನ ಸಲ್ಲಿಸಿದರು. ಕಾರ್ಗಿಲ್ ಯುದ್ಧ ನಡೆದ ಸಂದರ್ಭದಲ್ಲಿ ಧನೋವಾ ಅವರು 17ನೇ ಸ್ಕ್ವಾಡ್ರನ್ ನ ಯುದ್ಧ ವಿಮಾನದ ಫ್ಲೈಟ್ ಕಮಾಂಡರ್ ಆಗಿದ್ದರು.
ಮೇ 28ರಂದು ಧನೋವಾ ಅವರು ಸರ್ಸಾವ ವಾಯುನೆಲೆಗೆ ಭೇಟಿ ನೀಡಿ ಎಂಐ-17 ವಿ5 ಯುದ್ಧ ವಿಮಾನ ಚಲಾಯಿಸಿ, ಮತ್ತೊಮ್ಮೆ ಮಿಸ್ಸಿಂಗ್ ಮ್ಯಾನ್ ಫಾರ್ಮೇಷನ್  ಮೂಲಕ ಕಾರ್ಗಿಲ್ ಮೃತ ಯೋಧರಿಗೆ ಗೌರವ ಸಲ್ಲಿಸಲಿದ್ದಾರೆ.
1999ರ ಮೇ 28ರಂದು ಡ್ರಾಸ್ ವಲಯದಲ್ಲಿ ಭಾರತೀಯ ವಾಯುಪಡೆ ಎಂಐ-17  ಅನ್ನು ಕಳೆದುಕೊಂಡಿತು. ಅದರಲ್ಲಿ ಸ್ಕ್ವಾಡ್ರನ್ ಲೀಡರ್ ಆರ್. ಪುಂದಿರ್, ಫ್ಲೈಟ್ ಲೆಫ್ಟಿನೆಂಟ್ ಸ್ಕ್ವಾಡ್ರನ್ ಮಹಿಲನ್, ಸರ್ಜೆಂಟ್ ಆರ್. ಕೆ. ಸಹು ಹಾಗೂ ಸರ್ಜೆಂಟ್ ಪಿವಿಎನ್ ಆರ್. ಪ್ರಸಾದ್ ಮೃತಪಟ್ಟಿದ್ದರು ಎಂದು ಭಾರತೀಯ ವಾಯುಪಡೆಯ ವಕ್ತಾರರು ತಿಳಿಸಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com