ಮುಂದಿನ 5 ವರ್ಷಗಳು ನಮಗೆ ಅತ್ಯಂತ ಮಹತ್ವ: ನಿಯೋಜಿತ ಪ್ರಧಾನಿ ಮೋದಿ

ವಿಶ್ವದ ವ್ಯವಸ್ಥೆಯಲ್ಲಿ ಭಾರತ ಕಳೆದುಕೊಂಡ ಸ್ಥಾನವನ್ನು ಮತ್ತೆ ಪಡೆಯಲು ಲೋಕಸಭೆ ...

Published: 27th May 2019 12:00 PM  |   Last Updated: 27th May 2019 09:41 AM   |  A+A-


Prime Minister Narendra Modi addresses public meeting at the BJP office in Ahmedabad.

ಅಹಮದಾಬಾದ್ ನಲ್ಲಿ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ

Posted By : SUD SUD
Source : PTI
ಅಹಮದಾಬಾದ್: ವಿಶ್ವದ ವ್ಯವಸ್ಥೆಯಲ್ಲಿ ಭಾರತ ಕಳೆದುಕೊಂಡ ಸ್ಥಾನವನ್ನು ಮತ್ತೆ ಪಡೆಯಲು ಲೋಕಸಭೆ ಚುನಾವಣೆಯಲ್ಲಿ ದೇಶದ ಜನರು ಸ್ಪಷ್ಟ ತೀರ್ಪು ನೀಡಿ ನಮಗೆ ಮತ್ತೊಮ್ಮೆ ಅವಕಾಶ ನೀಡಿದ್ದಾರೆ ಎಂದು ನಿಯೋಜಿತ ಪ್ರಧಾನ ಮಂತ್ರಿ ನರೇಂದ್ರ  ಮೋದಿ ಹೇಳಿದ್ದಾರೆ.

ಗುಜರಾತ್ ನ ಬಿಜೆಪಿ ಘಟಕ ನಿನ್ನೆ ಅಹಮದಾಬಾದ್ ನಲ್ಲಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಕಂಡರು ಸಹ ಅಹಂಕಾರದಿಂದ ಮೆರೆಯದೆ ವಿನಮ್ರತೆಯಿಂದ ನಡೆದುಕೊಳ್ಳುವಂತೆ ನೂತನ ಸಂಸದರಿಗೆ ಕಿವಿಮಾತು ಹೇಳಿದರು.

ಭಾರತ ಮತ್ತು ವಿಶ್ವದಲ್ಲಿ ತೆಗೆದುಕೊಂಡರೆ ಮುಂದಿನ 5 ವರ್ಷಗಳ ಸಮಯ ಅತ್ಯಂತ ಮಹತ್ವದ್ದಾಗಿರುತ್ತದೆ. ಅದೃಷ್ಟವಶಾತ್, ನಮಗೆ ಈ ಬಾರಿ ಸ್ಪಷ್ಟ ಸಂಪೂರ್ಣ ಬಹುಮತ ಸಿಕ್ಕಿದೆ, ಅದರ ಜೊತೆಗೆ ಎನ್ ಡಿಎ ಮೈತ್ರಿಕೂಟಗಳ ಬೆಂಬಲ ಕೂಡ ಇದೆ. 1942ರಿಂದ 1947ರವರೆಗೆ ಭಾರತದ ಇತಿಹಾಸದಲ್ಲಿ ಮಹತ್ವದ್ದಾಗಿದ್ದಂತೆ ಮುಂದಿನ 5 ವರ್ಷಗಳ ಸಮಯ ಅತ್ಯಂತ ಪ್ರಮುಖವಾಗಿರುತ್ತದೆ ಎಂದರು.

ವಿಶ್ವದ ವ್ಯವಸ್ಥೆಯಲ್ಲಿ ಕಳೆದುಕೊಂಡ ಸ್ಥಾನವನ್ನು ಮರುಪಡೆಯಲು ನಮ್ಮ ದೇಶಕ್ಕೆ ಇದೊಂದು ಅವಕಾಶ, ಅದರಲ್ಲಿ ನಾವು ಯಶಸ್ಸು ಸಾಧಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಜನರ ಆತ್ಮಸಾಕ್ಷಿಯನ್ನು ಎಚ್ಚರಿಸಿ ದೇಶವನ್ನು ಮುನ್ನಡೆಸಲು ಇದೊಂದು ಅವಕಾಶವಾಗಿದೆ. ದೇಶವನ್ನು ಸಮಸ್ಯೆ ಮುಕ್ತ ಭಾರತವನ್ನಾಗಿ ಮಾಡಲು ಇದೊಂದು ಉತ್ತಮ ಸಮಯ ಎಂದರು.
Stay up to date on all the latest ರಾಷ್ಟ್ರೀಯ news
Poll
IPL2020

ಚೀನಾದ ಪ್ರಾಯೋಜಕರೊಂದಿಗಿನ ಒಪ್ಪಂದವನ್ನು ಮುಂದುವರಿಸಿರುವ ಕಾರಣ ಭಾರತೀಯರು ಐಪಿಎಲ್ ಅನ್ನು ಬಹಿಷ್ಕರಿಸಬೇಕೆಂದು ಸ್ವದೇಶಿ ಜಾಗರನ್ ಮಂಚ್ ಹೇಳಿದೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp