ಕೊಚ್ಚಿಯ ಬ್ರಾಡ್ ವೇ ರಸ್ತೆ ಬಳಿ ಅಗ್ನಿ ದುರಂತ; ಮೂರು ಮಳಿಗೆಗಳು ಸಂಪೂರ್ಣ ಭಸ್ಮ

ನಗರದ ಜನದಟ್ಟಣೆಯ ಬ್ರಾಡ್ ವೇಯಲ್ಲಿ ಸೋಮವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ದೊಡ್ಡ ಅಗ್ನಿ ಅವಘಡ ...

Published: 27th May 2019 12:00 PM  |   Last Updated: 27th May 2019 12:45 PM   |  A+A-


Broadway's is the second major fire in the state in recent days.

ಕೊಚ್ಚಿಯ ಬ್ರಾಡ್ ವೇ ರಸ್ತೆಯಲ್ಲಿ ನಡೆದ ಅಗ್ನಿ ಅವಘಡ

Posted By : SUD SUD
Source : The New Indian Express
ಕೊಚ್ಚಿ: ನಗರದ ಜನದಟ್ಟಣೆಯ ಬ್ರಾಡ್ ವೇ ರಸ್ತೆಯಲ್ಲಿ ಸೋಮವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ದೊಡ್ಡ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿ ದುರಂತದಲ್ಲಿ ಬಟ್ಟೆ ಅಂಗಡಿ ಸೇರಿದಂತೆ ಮೂರು ಮಳಿಗೆಗಳು ಸಂಪೂರ್ಣವಾಗಿ ನಾಶವಾಗಿದೆ.

ಅಗ್ನಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ. ಬೆಂಕಿ ಕಾಣಿಸಿಕೊಂಡ ನಂತರ ಅಕ್ಕಪಕ್ಕದ ಅಂಗಡಿಗಳನ್ನು ಸ್ಥಳಾಂತರಿಸಲಾಗಿದೆ. ಘಟನೆಯಲ್ಲಿ ಇದುವರೆಗೆ ಯಾರಿಗೂ ಗಾಯಗಳಾಗಿಲ್ಲ. ಬೆಂಕಿಯನ್ನು ನಂದಿಸಲು ನಾಲ್ಕು ಅಗ್ನಿಶಾಮಕ ಎಂಜಿನ್ ಗಳನ್ನು ಸ್ಥಳಕ್ಕೆ ತರಲಾಯಿತು.

ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ನಡೆದ ಎರಡನೇ ಅತಿದೊಡ್ಡ ಅಗ್ನಿ ದುರಂತವಾಗಿದೆ. ಮೇ 21ರಂದು ತಿರುವನಂತಪುರದ ಈಸ್ಟ್ ಫೋರ್ಟ್ ನಲ್ಲಿ ಬೃಹತ್ ಅಗ್ನಿ ಅವಘಡವುಂಟಾಗಿ ಹಲವು ಅಂಗಡಿಗಳು ಮತ್ತು ವಾಣಿಜ್ಯ ಮಳಿಗೆಗಳು ನಾಶವಾಗಿ ಹೋಗಿದ್ದವು.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp