ಎನ್ ಡಿಎ-2: ಯಾವ ದೇಶಕ್ಕೆ ಈ ಬಾರಿ ಮೊದಲ ವಿದೇಶ ಪ್ರವಾಸ ಕೈಗೊಳ್ಳಲಿದ್ದಾರೆ ಮೋದಿ: ಇಲ್ಲಿದೆ ಮಾಹಿತಿ

ಪ್ರಧಾನಿ ನರೇಂದ್ರ ಮೋದಿ ಮೇ.30 ಕ್ಕೆ ಎರಡನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದು, ಅವರ ಮುಂದಿನ ಆಡಳಿತದ ಬಗ್ಗೆ ನಿರೀಕ್ಷೆಗಳು ಹೆಚ್ಚಿವೆ.

Published: 27th May 2019 12:00 PM  |   Last Updated: 27th May 2019 11:48 AM   |  A+A-


Maldives may be Modi's 1st port of call in second stint

ಎನ್ ಡಿಎ-2: ಯಾವ ದೇಶಕ್ಕೆ ಈ ಬಾರಿ ಮೊದಲ ವಿದೇಶ ಪ್ರವಾಸ ಕೈಗೊಳ್ಳಲಿದ್ದಾರೆ ಮೋದಿ: ಇಲ್ಲಿದೆ ಮಾಹಿತಿ

Posted By : SBV SBV
Source : Online Desk
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮೇ.30 ಕ್ಕೆ ಎರಡನೇ  ಅವಧಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದು, ಅವರ ಮುಂದಿನ ಆಡಳಿತದ ಬಗ್ಗೆ ನಿರೀಕ್ಷೆಗಳು ಹೆಚ್ಚಿವೆ. 

ವಿದೇಶಿ ರಾಜತಾಂತ್ರಿಕ ನಿಪುಣರೂ ಆಗಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಎರಡನೇ ಅಧಿಕಾರಾವಧಿಯಲ್ಲಿ ಮೊದಲ ವಿದೇಶ ಪ್ರವಾಸವನ್ನು ಯಾವ ದೇಶಕ್ಕೆ ಕೈಗೊಳ್ಳಲಿದ್ದಾರೆ ಎಂಬ ಕುತೂಹಲ ಮೂಡಿದೆ. 

ಈ ಬಗ್ಗೆ ಹಲವು ವಿಶ್ಲೇಷಣೆಗಳು ನಡೆಯುತ್ತಿದ್ದು, ಮೊದಲ ವಿದೇಶ ಪ್ರವಾಸವನ್ನು ಮೋದಿ ಮಾಲ್ಡೀವ್ಸ್ ಗೆ ಕೈಗೊಳ್ಳಲಿದ್ದಾರೆ. 

ಕಳೆದ 5 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಬಹುತೇಕ ನೆರೆ ರಾಷ್ಟ್ರಗಳಿಗೆ ಭೇಟಿ ನೀಡಿದ್ದರು. ಆದರೆ  ಮಾಲ್ಡೀವ್ಸ್ ಗೆ ಭೇಟಿ ನೀಡಿರಲಿಲ್ಲ. ನವೆಂಬರ್ ತಿಂಗಳಲ್ಲಿ ಅಲ್ಲಿನ ಅಧ್ಯಕ್ಷ ಇಬ್ರಾಹಿಮ್ ಸೋಲಿಹ್ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 

ಮೋದಿ ತಮ್ಮ ಮೊದಲ ಭೇಟಿಯನ್ನು ಮಾಲ್ಡೀವ್ಸ್ ಗೆ ಕೈಗೊಳ್ಳಲಿದ್ದಾರೆಯೇ ಎಂಬ ಮಾಹಿತಿಯನ್ನು ನವದೆಹಲಿಯ ಅಧಿಕಾರಿಗಳು ಇನ್ನಷ್ಟೇ ಖಚಿತಪಡಿಸಬೇಕಿದೆ. 2014 ರಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೋದಿ ಭೂತಾನ್ ಗೆ ತಮ್ಮ ಮೊದಲ ವಿದೇಶ ಭೇಟಿ ನೀಡಿದ್ದರು.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp