ಹಾಗಾದ್ರೆ ಮೋದಿಗೆ ಮತದಾನದ ಹಕ್ಕು ಬೇಡವೇ: ಬಾಬಾ ರಾಮ್ ದೇವ್ ಗೆ ಓವೈಸಿ ಪ್ರಶ್ನೆ

ಜನಸಂಖ್ಯಾ ನಿಯಂತ್ರಣಕ್ಕೆ 3 ನೇ ಮಗುವಿಗೆ ಮತದಾನದ ಹಕ್ಕು, ಸರ್ಕಾರಿ ಸೌಲಭ್ಯಗಳನ್ನು ತಿರಸ್ಕರಿಸುವ ಕಾನೂನು ಜಾರಿಯಾಗಬೇಕೆಂದು ಹೇಳಿದ್ದ ಬಾಬಾ ರಾಮ್ ದೇವ್ ಸಲಹೆಯನ್ನು ಸಂಸದ ಅಸಾದುದ್ದೀನ್
ಹಾಗಾದ್ರೆ ಮೋದಿಗೆ ಮತದಾನದ ಹಕ್ಕಿರಬಾರದಾ?: ಓವೈಸಿ
ಹಾಗಾದ್ರೆ ಮೋದಿಗೆ ಮತದಾನದ ಹಕ್ಕಿರಬಾರದಾ?: ಓವೈಸಿ
ನವದೆಹಲಿ: ಜನಸಂಖ್ಯಾ ನಿಯಂತ್ರಣಕ್ಕೆ 3 ನೇ ಮಗುವಿಗೆ ಮತದಾನದ ಹಕ್ಕು, ಸರ್ಕಾರಿ ಸೌಲಭ್ಯಗಳನ್ನು ತಿರಸ್ಕರಿಸುವ ಕಾನೂನು ಜಾರಿಯಾಗಬೇಕೆಂದು ಹೇಳಿದ್ದ ಬಾಬಾ ರಾಮ್ ದೇವ್ ಸಲಹೆಯನ್ನು ಸಂಸದ ಅಸಾದುದ್ದೀನ್ ಓವೈಸಿ ಖಂಡಿಸಿದ್ದಾರೆ. 
ಜನರು ಅಸಾಂವಿಧಾನಿಕ ವಿಷಯಗಳನ್ನು ಮಾತನಾಡಬಾರದೆಂಬ ಕಾನೂನು ಏನೂ ಇಲ್ಲ. ಆದರೆ ಬಾಬಾ ರಾಮ್ ದೇವ್ ಅವರ ಈ ರೀತಿಯ ಆಲೋಚನೆಗಳೇಕೆ ಅನಾವಶ್ಯಕವಾಗಿ ಗಮನ ಪಡೆದುಕೊಳ್ಳುತ್ತವೆ ಎಂದು ಓವೈಸಿ ಟ್ವೀಟ್ ಮಾಡಿದ್ದಾರೆ. 
3 ನೇ ಮಗು ಎಂಬ ಒಂದೇ ಕಾರಣಕ್ಕಾಗಿ ಮೋದಿ ಮತದಾನದ ಹಕ್ಕನ್ನೇ ಕಳೆದುಕೊಳ್ಳಬೇಕು ಅಂತಾಗಬಾರದು ಅಲ್ಲವೇ? ಎಂದು ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com