ವಾಯುಸೇನೆಗೆ 'ಮಹಿಳಾ ಶಕ್ತಿ': ಮಹಿಳಾ ಸಿಬ್ಬಂದಿಯಿಂದ ಎಂಐ17 ಯುದ್ಧ ಹೆಲಿಕಾಪ್ಟರ್ ಚಾಲನೆ!

ಭಾರತೀಯ ವಾಯು ಸೇನೆಗೆ ಇದೀಗ ಮಹಿಳಾ ಶಕ್ತಿ ಕೂಡ ಪ್ರಾಪ್ತವಾಗಿದ್ದು, ವಾಯುಸೇನೆಯ ಮಹಿಳಾ ಸಿಬ್ಬಂದಿಗಳು ಯುದ್ಧ ಹೆಲಿಕಾಪ್ಟರ್ ಅನ್ನು ಚಲಾಯಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

Published: 28th May 2019 12:00 PM  |   Last Updated: 28th May 2019 12:48 PM   |  A+A-


Indian Air Force all-women crew flies Mi-17 chopper for first time

ಎಂ17 ಯುದ್ಧ ಹೆಲಿಕಾಪ್ಟರ್ ಚಲಾಯಿಸಿದ ಮಹಿಳಾ ಸಿಬ್ಬಂದಿ

Posted By : SVN SVN
Source : UNI
ಚಂಡೀಗಢ: ಭಾರತೀಯ ವಾಯು ಸೇನೆಗೆ ಇದೀಗ ಮಹಿಳಾ ಶಕ್ತಿ ಕೂಡ ಪ್ರಾಪ್ತವಾಗಿದ್ದು, ವಾಯುಸೇನೆಯ ಮಹಿಳಾ ಸಿಬ್ಬಂದಿಗಳು ಯುದ್ಧ ಹೆಲಿಕಾಪ್ಟರ್ ಅನ್ನು ಚಲಾಯಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

ಹೌದು.. ದೇಶದ ವಾಯು ಸೇನೆ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮಹಿಳಾ ಸಿಬ್ಬಂದಿಯಿರುವ ಹೆಲಿಕಾಪ್ಟರ್ ಆಗಸದಲ್ಲಿ ಹಾರಾಟ ನಡೆಸಿದೆ. ಎಂಐ 17 ಯುದ್ಧ ಹೆಲಿಕಾಪ್ಟರ್ ಸಂಪೂರ್ಣವಾಗಿ ಮಹಿಳೆಯರಿಂದಲೇ ನಿಯಂತ್ರಿಸಲ್ಪಡುವ ಮೂಲಕ ಇತಿಹಾಸ ರಚಿಸಿದೆ. 

ಭಾರತೀಯ ವಾಯುಪಡೆಯ ಎಂಐ-17 ವಿ 5 ಸಮರ ಹೆಲಿಕಾಪ್ಟರ್ ನಲ್ಲಿ ಮಹಿಳಾ ಪೈಲಟ್ ಗಳು ಸೇರಿದಂತೆ ಒಟ್ಟು ಮೂವರು ಮಹಿಳೆಯರು ಹಾರಾಟ ನಡೆಸಿದ್ದಾರೆ. ಕ್ಯಾಪ್ಟನ್, ಫ್ಲೈಟ್ ಲೆಫ್ಟಿನೆಂಟ್ ಪರೂಲ್ ಭಾರದ್ವಾಜ್, ಕೋ ಪೈಲಟ್ ಅಮನ್ ನಿಧಿ ಹಾಗೂ ಫ್ಲೈಟ್ ಇಂಜಿನಿಯರ್ ಫ್ಲೈಟ್ ಲೆಫ್ಟಿನೆಂಟ್ ಹೀನಾ ಜೈಸ್ವಾಲ್ ಸೇನಾ ಕಾಪ್ಟರ್ ನಲ್ಲಿ ಹಾರಾಟ ನಡೆಸಿ ಇತಿಹಾಸ ಬರೆದಿದ್ದಾರೆ.

ಇತಿಹಾಸ ಬರೆದ ಮಹಿಳಾ ಮಣಿಯರಿಗೆ ಬೆಂಗಳೂರು ನಂಟು
ಇನ್ನು ಛತ್ತೀಸ್ ಗಢ ಮೂಲದ ಹೀನಾ ಜೈಸ್ವಾಲ್, ಭಾರತೀಯ ವಾಯಸೇನೆಯ ಮೊದಲ ಮಹಿಳಾ ಇಂಜಿನಿಯರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.  ಈಕೆ ಹೆಲಿಕಾಪ್ಟರ್ ಚಾಲನೆಗೆ ಬೇಕಾದ ಅತ್ಯುನ್ನತ ತರಬೇತಿಯನ್ನು ಬೆಂಗಳೂರಿನ ಯಲಹಂಕ ವಾಯುನೆಲೆಯ ಹಾಗೂ ತೆಲಂಗಾಣದ ಹಕೀಂಪೇಟೆಯ ಶಿಬಿರದಲ್ಲಿ ಪಡೆದಿದ್ದಾರೆ ಎಂಬುದು ವಿಶೇಷ. ಅಂತೆಯೇ   ಫ್ಲೈಟ್ ಲೆಫ್ಟಿನೆಂಟ್ ಪರೂಲ್ ಭಾರದ್ವಾಜ್ ಪಂಜಾಬ್ ನ ಮುಕೆರಿಯನ್ ಮೂಲದವರಾಗಿದ್ದು, ದೇಶದ ಎಂಐ-17 ವಿ 5 ಸಮರ ಹೆಲಿಕಾಪ್ಟರ್ ಚಲಾಯಿಸಿದ ಮೊದಲ ಮಹಿಳಾ ಪೈಲಟ್ ಎನಿಸಿಕೊಂಡಿದ್ದಾರೆ. ಜಾರ್ಖಂಡ್ ರಾಜ್ಯದ ರಾಂಚಿ ಮೂಲದ ನಿಧಿಯವರೂ ಸಹ ಭಾರತೀಯ ವಾಯುಸೇನೆಯ ಮೊದಲ ಮಹಿಳಾ ಪೈಲಟ್ ಎಂಬ ಹೆಮ್ಮೆಗೆ ಪಾತ್ರರಾಗಿದ್ದು, ಬೆಂಗಳೂರಿನ ಯಲಹಂಕ ಮತ್ತು ತೆಲಂಗಾಣದ ಹಕೀಂಪೇಟೆಯಲ್ಲಿ ತರಬೇತಿ ಪಡೆದಿದ್ದಾರೆ. ಭಾರತೀಯ ವಾಯುಸೇನೆಯ ಹೆಲಿಕಾಪ್ಟರ್ ಹಾರಾಟ ಈ ಮೂವರು ಮಹಿಳೆಯರ ಮತ್ತೊಂದು ಸಾಧನೆಯಾಗಿದೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp