ರಾಹುಲ್ ರಾಜೀನಾಮೆ ಕಾಂಗ್ರೆಸ್ ಪಾಲಿಗೆ ನೇಣಿನ ಕುಣಿಕೆಯಾಗಲಿದೆ: ಲಾಲೂ ಯಾದವ್

ರಾಹುಲ್ ಗಾಂಧಿ ತಮ್ಮ ಹುದ್ದೆಯನ್ನು ತೊರೆಯುವ ನಿರ್ಧಾರ ಕಾಂಗ್ರೆಸ್ ಪಾಲಿಗೆ ನೇಣಿನ ಕುಣಿಕೆಯಾಗಲಿದೆ ಎಂದು ಬಿಹಾರ ಮಾಜಿ ಮುಖ್ಯಮಂತ್ರಿ, ಆರ್ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಹೇಳಿದ್ದಾರೆ.
ರಾಹುಲ್ ರಾಜೀನಾಮೆ ಕಾಂಗ್ರೆಸ್ ಪಾಲಿಗೆ ನೇಣಿನ ಕುಣಿಕೆಯಾಗಲಿದೆ: ಲಾಲೂ ಯಾದವ್
ರಾಹುಲ್ ರಾಜೀನಾಮೆ ಕಾಂಗ್ರೆಸ್ ಪಾಲಿಗೆ ನೇಣಿನ ಕುಣಿಕೆಯಾಗಲಿದೆ: ಲಾಲೂ ಯಾದವ್
ಪಾಟ್ನಾ: ರಾಹುಲ್ ಗಾಂಧಿ ತಮ್ಮ ಹುದ್ದೆಯನ್ನು ತೊರೆಯುವ ನಿರ್ಧಾರ ಕಾಂಗ್ರೆಸ್ ಪಾಲಿಗೆ ನೇಣಿನ ಕುಣಿಕೆಯಾಗಲಿದೆ ಎಂದು ಬಿಹಾರ ಮಾಜಿ ಮುಖ್ಯಮಂತ್ರಿ, ಆರ್ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಹೇಳಿದ್ದಾರೆ.
"ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ತೊರೆಯುವ ನಿರ್ಧಾರವು ಅವರ ಪಕ್ಷಕ್ಕೆ ಮಾತ್ರ ನೇಣಿನ ಕುಣಿಕೆಯಾಗುವುದಿಲ್ಲ ಬದಲಿಗೆ ಸಂಘ ಪರಿವಾರದ ವಿರುದ್ಧ ಹೋರಾಡುವ ಪ್ರತಿಯೊಂದು ಸಮುದಾಯ, ಸಂಘಟನೆಗಳಿಗೆ ಸಹ ಇದು ಘೋರ ಆತ್ಮಹತ್ಯೆಗೆ ಸಮಾನವೆನಿಸಲಿದೆ" ಲಾಲೂ ಪ್ರಸಾದ್ ಹೇಳಿದ್ದಾರೆಂದು ಪ್ರಸಿದ್ದ ಆಂಗ್ಲ ಪತ್ರಿಕೆ "ದಿ ಟೆಲಿಗ್ರಾಫ್" ವರದಿ ಂಆಡಿದೆ.
"ಒಂದೊಮ್ಮೆ ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನದಿಂದಿದ್ಳಿದು ಗಾಂಧಿ-ನೆಹರು ಕುಟುಂಬದ ಹೊರತಾಗಿರುವ ವ್ಯಕ್ತಿಗೆ ಅಧ್ಯಕ್ಷ ಗಾದಿ ನೀಡಿದ್ದಾದರೆ ಆಗಲೂ ಹೊರಪ್ರಪಂಚ ಕಾಂಗ್ರೆಸ್ ಅಧ್ಯಕ್ಷರು ಗಾಂಧಿ ಕುಟುಂಬದ ಕೈಗೊಂಬೆ ಎಂದೇ ಹೇಳುತ್ತದೆ. ರಾಹುಲ್ ಗೆ ಇದು ಗೊತ್ತಿದ್ದೂ ವಿರೋಧಿಗಳಿಗೇಕೆ ಇಂತಹಾ ಅವಕಾಶ ನೀಡಬೇಕು?"
2019 ರ ಲೋಕಸಭಾ ಚುನಾವಣೆಯ ಫಲಿತಾಂಶವನ್ನು ವಿಶ್ಲೇಷಿಸಿದ ಲಾಲು ಪ್ರಸಾದ್ ಯಾದವ್, ಮೋದಿ ಸರ್ಕಾರಕ್ಕೆ ಭಾರೀ ಜಯ  ಒಂದು ಸಾಮೂಹಿಕ ವೈಫಲ್ಯವೆಂದು ಎಂದು ಒಪ್ಪಿಕೊಳ್ಳಬೇಕು.ಅಲ್ಲದೆ ನಮ್ಮ ತಪ್ಪೇನು ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು.
ಸಾರ್ವಜನಿಕರಿಗೆ ರಾಷ್ಟ್ರೀಯತೆಯ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ತಮ್ಮ ಕಾರ್ಯತಂತ್ರ ಮತ್ತು ಕ್ರಮಗಳನ್ನು ಸೂಕ್ತ ರೀತಿಯಲ್ಲಿ ಅರಿವಿಗೆ ತರಲು ವಿಫಲವಾದವು ಎಂದು ಲಾಲೂ ಹೇಳಿದ್ದಾರೆ.
"ಪ್ರಾದೇಶಿಕ ಪಕ್ಷಗಳು ಹೆಚ್ಚು ಸ್ಥಾನಗಳಿಗೆ ಚೌಕಾಶಿ ಮಾಡುವುದು ತಪ್ಪಲ್ಲ ಆದರೆ ಪ್ರಧಾನಿ ಅಭ್ಯರ್ಥಿಯಾಗಿ ರಾಷ್ಟ್ರೀಯ ದೃಷ್ಟಿಕೋನವನ್ನು ಹೊಂದಿರುವ ಯಾರೊಬ್ಬರನ್ನಾದರೂ ಸೂಚಿಸುವುದು ಅನಿವಾರ್ಯಆಗಲಿದೆ" ಅವರು ಹೇಳಿದ್ದಾರೆ. ಚುನಾವಣೆಯಲ್ಲಿ ಪ್ರತಿಪಕ್ಷಗಳು ಪ್ರಧಾನಿ ಅಭ್ಯರ್ಥಿ ಯಾರೆಂದು ಘೋಷಿಸಲಿಲ್ಲ ಎಂದು ಕೇಳಲಾಗಿ "ನಮ್ಮದು ಮದುವೆ ದಿಬ್ಬಣವಲ್ಲ, ವರ ಯಾರೆಂದು ನಾವು ಮೊದಲೇ ತೀರ್ಮಾನಿಸುವುದಿಲ್ಲ" ಎಂದು ಉತ್ತರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com