ಮತ್ತೆ ಮೋದಿಗೆ ಗಾದಿ, ಇದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ಸಕಾಲ: ಶಿವಸೇನೆ

ಬಿಜೆಪಿ ಸಹವರ್ತಿ ಪಕ್ಷವಾಗಿರುವ ಶಿವಸೇನೆ ಬುಧವಾರ ಮತ್ತೆ ರಾಮಮಂದಿರದ ಪ್ರಸ್ತಾಪ ಎತ್ತಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಎರಡನೇ ಅವಧಿಗೆ ಅಧಿಕಾರಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣನಿರ್ಮಾಣಕ್ಕೆ ಇದು ಸಮಯ ಎಂದು ಶಿವಸೇನೆ ಹೇಳಿದೆ.

Published: 29th May 2019 12:00 PM  |   Last Updated: 29th May 2019 04:30 AM   |  A+A-


Shiv Sena chief Uddhav Thackeray (File | PTI)

ಉದ್ಭವ್ ಠಾಕ್ರೆ

Posted By : RHN RHN
Source : The New Indian Express
ನವದೆಹಲಿ: ಬಿಜೆಪಿ ಸಹವರ್ತಿ ಪಕ್ಷವಾಗಿರುವ ಶಿವಸೇನೆ ಬುಧವಾರ ಮತ್ತೆ ರಾಮಮಂದಿರದ ಪ್ರಸ್ತಾಪ ಎತ್ತಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಎರಡನೇ ಅವಧಿಗೆ ಅಧಿಕಾರಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಇದು ಸಮಯ ಎಂದು ಶಿವಸೇನೆ ಹೇಳಿದೆ.

ಬಿಜೆಪಿ ಅಧಿಕಾರಕ್ಕೆ ಬರುವುದರೊಡನೆ ರಾಮಮಂದಿರದ ಕೆಲಸ ಪ್ರಾರಂಭ ಎಂದು ಶಿವಸೇನೆ ತನ್ನ ಮುಖವಾಣಿ "ಸಾಮ್ನಾ" ದಲ್ಲಿ ಬರೆದುಕೊಂಡಿದೆ.

ರಾಮನ ಆದರ್ಶವನ್ನು ಮನಸಿನಲ್ಲಿಟ್ಟುಕೊಂಡಿರುವ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತಿದೆ, ಕೋಟಿ ಕೋಟಿ ಜನರು ಮತ ಚಲಾಯಿಸಿದ್ದಾರೆ.ಹಾಗಾಗಿ ದೇಶದಲ್ಲಿ ರಾಮರಾಜ್ಯ ಸ್ಥಾಪನೆ ಮಾಡಬಹುದು.ಹಾಗೆಯೇ ನಮ್ಮ ಸಂಸ್ಕೃತಿಯ ಹೆಗ್ಗುರುತಾಗಿ ಶ್ರೀರಾಮ ಮಂದಿರವನ್ನು ನಿರ್ಮಾಣ ಮಾಡಲು ಮುಂದಾಗಬಹುದು. ಈ ಹಿಂದೆ ರಾಮಮಂದಿರ ನಿರ್ಮಾಣಕ್ಕಾಗಿ ಸಾವಿರಾರು ಕರಸೇವಕರು ತಮ್ಮ ಜೀವನ ತ್ಯಾಗ ಮಾಡಿದ್ದು ಅವರ ತ್ಯಾಗವೆಂದಿಗೂ ವ್ಯರ್ಥ ಆಗುವುದಿಲ್ಲ.ಜನರ ಇಚ್ಚೆಯಂತೆ ಈಗ ಆರಿಸಿಬಂದಿರುವ ಸರ್ಕಾರ ರಾಮಮಂದಿರ ನಿರ್ಮಾಣವನ್ನು ಮಾಡಿಯೇ ತೀರಲಿದೆ" ಸಮ್ಪಾದಕೀಯದಲ್ಲಿ ಹೇಳಿದೆ.

"ರಾಮನ ಕೆಲಸ ನೆರವೇರಲಿದೆ" ಎಂಬ ಶೀರ್ಷಿಕೆಯಡಿಯಲ್ಲಿ ಗುರುವಾರ ನಡೆಯುವ ನರೇಂದ್ರ ಮೋದಿಯವರ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ಶ್ರೀರಾಮನ ರಾಜ್ಯಾಭಿಷೇಕಕ್ಕೆ ಸಮಾನವೆಂದು ಹೇಳಲಾಗಿದೆ.

ಇದಲ್ಲದೆ ಮೋದಿ ಅಧಿಕಾರದಲ್ಲಿ ರೈತರ ಆತ್ಮಹತ್ಯೆ ಇರುವುದಿಲ್ಲ, ಪ್ರತಿಯೊಬ್ಬರೂ ಎರಡು ಹೊತ್ತಿನ ಊಟ ಪಡೆದೇ ಪಡೆಯುತ್ತಾರೆ.ಜಾತಿ, ಧರ್ಮದ ಹಂಗಿಲ್ಲದೆ ಎಲ್ಲರೂ ತಮ್ಮ ಋಣಭಾರವನ್ನು ಕಡಿಮೆಗೊಳಿಸಿಕೊಳ್ಳುತ್ತಾರೆ.ಅಖಂಡ ಭರತದ ಕನಸು ನನಸಾಗಲಿದ್ದು ಇಡೀ ವಿಶ್ವವು ಭಾರತವನ್ನು ಆಶೀರ್ವದಿಸ;ಲಿದೆ. ಎಂದೂ ಶಿವಸೇನೆ ಹೇಳಿದೆ.

2019 ಲೋಕಸಭೆ ಚುನಾವಣೆ ಆದೇಶ ರಾಮಮಂದಿರ ಹಾಗೂ ರಾಮರಾಜ್ಯಕ್ಕೆ ಜನರ ಆದೇಶವಾಗಿದೆ ಎಂದು ಶಿವಸೇನೆ ಹೇಳಿದೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp