ಟಿವಿಯಲ್ಲಿ ಪುತ್ರ ಮೋದಿ ಪ್ರಮಾಣವಚನ ವೀಕ್ಷಿಸಿ, ಚಪ್ಪಾಳೆ ತಟ್ಟಿದ 95 ವರ್ಷದ ತಾಯಿ ಹೀರಾಬೆನ್

ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೇರಿದ ನರೇಂದ್ರ ಮೋದಿ ಅವರು ಗುರುವಾರ ಸತತ...

Published: 31st May 2019 12:00 PM  |   Last Updated: 31st May 2019 01:19 AM   |  A+A-


95-year-old Hiraben claps as son Narendra takes oath as Prime Minister for second time

ಹೀರಾಬೆನ್

Posted By : LSB LSB
Source : PTI
ಅಹಮದಾಬಾದ್: ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೇರಿದ ನರೇಂದ್ರ ಮೋದಿ ಅವರು ಗುರುವಾರ ಸತತ ಎರಡನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಪುತ್ರನ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ಟಿವಿಯಲ್ಲಿ ವೀಕ್ಷಿಸುತ್ತಿದ್ದ ಮೋದಿ ಅವರ ತಾಯಿ 95 ವರ್ಷದ ಹೀರಾಬೆನ್ ಅವರು ಚಪ್ಪಾಳಿ ತಟ್ಟಿ ಸಂತಸವನ್ನು ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ ಟಿವಿಯಲ್ಲಿ ಬರುತ್ತಿದ್ದಂತೆ ಹೀರಾಬೆನ್ ಅವರು ಸಂತೋಷದಿಂದ ಚಪ್ಪಾಳೆ ತಟ್ಟುತ್ತಿರುವ ಫೋಟೋ ಇದೀಗ ಸಮಾಜಿಕ ತಾಣದಲ್ಲಿ ವೈರಲ್ ಆಗಿದೆ.
ಇಂದು ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಎನ್ ಡಿಎ ಸಂಸದೀಯ ಮಂಡಳಿಯ ನಾಯಕ ನರೇಂದ್ರ ಮೋದಿ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಬಿಮ್ ಸ್ಟೆಕ್ ದೇಶಗಳ ಮುಖ್ಯಸ್ಥರು ಸೇರಿದಂತೆ ಹಲವು ವಿದೇಶಿ ಗಣ್ಯರು, ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಪಾಲರು, ಪ್ರತಿಪಕ್ಷಗಳ ನಾಯಕರು, ಮಾಜಿ ಪ್ರಧಾನಿಗಳು ಹಾಗೂ ಮಾಜಿ ರಾಷ್ಟ್ರಪತಿಗಳು ಸೇರಿದಂತೆ ಸಾವಿರಾರು ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp