ಮೋದಿ ಸರ್ಕಾರ 2.0: ಸಂಪುಟದಿಂದ ಮಿಸ್ ಆದ ಪ್ರಭಾವಿ ಮಾಜಿ ಕೇಂದ್ರ ಸಚಿವರಿವರು!

ನರೇಂದ್ರ ಮೋದಿ ಅವರು 2ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಮೋದಿ ಕ್ಯಾಬಿನೆಟ್ ಗೆ ಒಟ್ಟು 57 ನಾಯಕರು ಸಚಿವರಾಗಿ ಸೇರ್ಪಡೆಯಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ನರೇಂದ್ರ ಮೋದಿ ಅವರು 2ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಮೋದಿ ಕ್ಯಾಬಿನೆಟ್ ಗೆ ಒಟ್ಟು 57 ನಾಯಕರು ಸಚಿವರಾಗಿ ಸೇರ್ಪಡೆಯಾಗಿದ್ದಾರೆ.
ಪ್ರಧಾನಿ ಮೋದಿ ಸೇರಿದಂತೆ ಒಟ್ಟು 57 ಸಚಿವರು ಕ್ಯಾಬಿನೆಟ್ ಗೆ ಸೇರ್ಪಡೆಯಾಗಿದ್ದು, ಈ ಪೈಕಿ 25 ಮಂದಿ ರಾಜ್ಯಖಾತೆ ಸಚಿವರಾಗಿದ್ದಾರೆ. ಅಂತೆಯೇ ಈ ಹಿಂದಿನ ಸರ್ಕಾರದಲ್ಲಿದ್ದ 33 ಮಂದಿ ಸಚಿವರು 2ನೇ ಅವಧಿಗೂ ಮುಂದುವರೆದಿದ್ದು, 25 ಮಂದಿ ಸಂಸದರು ಮೊದಲ ಬಾರಿಗೆ ಮೋದಿ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ.
ಸುಂಪುಟದಿಂದ ಪ್ರಭಾವಿಗಳಿಗೆ ಕೊಕ್
ಇನ್ನು ಕಳೆದ ಮೋದಿ ಸರ್ಕಾರದಲ್ಲಿ ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದ ನಾಯಕರನ್ನು ನೂತನ ಸಂಪುಟದಿಂದ ಕೈಬಿಡಲಾಗಿದೆ. ಕಳೆದ ಮೋದಿ ಸರ್ಕಾರದಲ್ಲಿ ವಿತ್ತ ಇಲಾಖೆ ನಿರ್ವಹಿಸಿದ್ದ ಅರುಣ್ ಜೇಟ್ಲಿ, ವಿದೇಶಾಂಗ ಇಲಾಖೆ ನಿರ್ವಹಿಸಿದ್ದ ಸುಷ್ಮಾ ಸ್ವರಾಜ್, ಜೆಪಿ ನಡ್ಡಾ, ಯುವ ಜನ ಮತ್ತು ಕ್ರೀಡಾ ಇಲಾಖೆ  ನಿರ್ವಹಿಸಿದ್ದ ರಾಜ್ಯವರ್ಧನ್ ಸಿಂಗ್ ರಾಥೋಡ್, ರೈಲ್ವೇ ಇಲಾಖೆ ನಿರ್ವಹಿಸಿದ್ದ ಸುರೇಶ್ ಪ್ರಭು, ಮೇನಕಾ ಗಾಂಧಿ, ಮಹೇಶ್ ಶರ್ಮಾ, ಮನೋಜ್ ಸಿನ್ಹಾ, ವಿಜಯ್ ಗೋಯಲ್, ಎಸ್ ಎಸ್ ಅಹ್ಲುವಾಲಿಯಾ, ಜಯಂತ್ ಸಿನ್ಹಾ, ಉಮಾ ಭಾರತಿ, ರಾಧಾ ಮೋಹನ್ ಸಿಂಗ್, ಬಂಡಾರು ದತ್ತಾತ್ರೆಯ, ರಾಜೀವ್ ಪ್ರತಾಪ್ ರೂಡಿ, ಕೆ ಅಲ್ಫಾನ್ಸ್, ಪಿ ರಾಧಾಕೃಷ್ಣನ್, ರಾಮ್ ಕೃಪಾಲ್ ಯಾದವ್, ಹರಿಬಾಯಿ ಚೌಧರಿ, ಸುದರ್ಶನ್ ಭಗತ್, ಎಸ್ ಆರ್ ಭಾಮ್ರೆ, ಅನಂತ್ ಕುಮಾರ್ ಹೆಗಡೆ ಮತ್ತು ರಮೇಶ್ ಜಿಗಜಿಣಗಿ ಅವರನ್ನು ಸಂಪುಟದಿಂದ ಕೈ ಬಿಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com