ಮೋದಿ 2.0 ಮೊದಲ ನಿರ್ಧಾರ: ಯೋಧರ ಮಕ್ಕಳಿಗೆ ವಿದ್ಯಾರ್ಥಿ ವೇತನ ಹೆಚ್ಚಳ, ಹುತಾತ್ಮ ಪೊಲೀಸರ ಮಕ್ಕಳಿಗೂ ವಿಸ್ತರಣೆ

ಪ್ರಧಾನಿ ನರೇಂದ್ರ ಮೋದಿ 2.0 ಸರ್ಕಾರದ ಮೊದಲ ಸಚಿವ ಸಂಪುಟ ಸಭೆ ಮೇ.31 ರಂದು ನಡೆದಿದ್ದು, ದೇಶ ರಕ್ಷಣೆ ಮಾಡುವವರಿಗೆ ಕೊಡುಗೆ ನೀಡಲಾಗಿದೆ.

Published: 31st May 2019 12:00 PM  |   Last Updated: 31st May 2019 07:13 AM   |  A+A-


Modi govt 2.0: In first decision, scholarship hiked for martyrs' children

ದೇಶ ರಕ್ಷಕರಿಗೆ ಮೋದಿ 2.0 ಸರ್ಕಾರದ ಕೊಡುಗೆ: ಮೊದಲ ಸಚಿವ ಸಂಪುಟ ಸಭೆಯ ನಿರ್ಣಯಗಳ ಬಗ್ಗೆಇಲ್ಲಿದೆ ಮಾಹಿತಿ

Posted By : SBV SBV
Source : PTI
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ 2.0 ಸರ್ಕಾರದ ಮೊದಲ ಸಚಿವ ಸಂಪುಟ ಸಭೆ ಮೇ.31 ರಂದು ನಡೆದಿದ್ದು, ದೇಶ ರಕ್ಷಣೆ ಮಾಡುವವರಿಗೆ ಕೊಡುಗೆ ನೀಡಲಾಗಿದೆ. 

ರಾಷ್ಟ್ರೀಯ ರಕ್ಷಣಾ ನಿಧಿ ವ್ಯಾಪ್ತಿಯಗೆ ಬರುವ ಪ್ರಧಾನ ಮಂತ್ರಿ ವಿದ್ಯಾರ್ಥಿ ವೇತನ ಯೋಜನೆಯಲ್ಲಿ ಕೆಲವು ಮಹತ್ತರ  ಬದಲಾವಣೆಗಳನ್ನು ಜಾರಿಗೆ ತರಲು ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. 

ಯೋಧರ ಮಕ್ಕಳಿಗೆ ಈ ಹಿಂದೆ ಮಾಸಿಕ 2000 ರೂಪಾಯಿ ಇದ್ದ ವಿದ್ಯಾರ್ಥಿ ವೇತನವನ್ನು ಈಗ ವಿದ್ಯಾರ್ಥಿಗಳಿಗೆ 2,500 ರೂಪಾಯಿಗಳಿಗೆ ಏರಿಕೆ ಮಾಡಲಾಗಿದ್ದರೆ, ವಿದ್ಯಾರ್ಥಿನಿಯರಿಗೆ 2,250 ರಿಂದ 3000 ಕ್ಕೆ ಏರಿಕೆ ಮಾಡಲಾಗಿದೆ. 

ಇನ್ನು ವಿದ್ಯಾರ್ಥಿ ವೇತನದ ವ್ಯಾಪ್ತಿಯನ್ನು ನಕ್ಸಲ್ ಹಾಗೂ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ರಾಜ್ಯ ಪೊಲೀಸ್ ಅಧಿಕಾರಿಗಳ ಮಕ್ಕಳಿಗೆ ಲಭ್ಯವಾಗುವಂತೆ ವಿಸ್ತರಿಸಲಾಗಿದೆ. ಇದೇ ವೇಳೆ ರಾಜ್ಯ ಪೊಲೀಸ್ ಅಧಿಕಾರಿಗಳ ಮಕ್ಕಳಿಗೆ ಹೊಸದಾಗಿ ವಿದ್ಯಾರ್ಥಿ ವೇತನ ಪಡೆಯುವ ಮಿತಿಯನ್ನು ವಾರ್ಷಿಕ 500 ಕ್ಕೆ ನಿಗದಿಪಡಿಸಲಾಗಿದೆ. 
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp