ಲಂಕಾ ಸ್ಪೋಟದಲ್ಲಿ ಇಸಿಸ್ ಪಾತ್ರ: ತನಿಖೆಗಾಗಿ ಎನ್ಐಎ ತಂಡದಿಂದ ಕೊಲಂಬೋ ಭೇಟಿ

ಶ್ರೀಲಂಕಾದಲ್ಲಿ ಈಸ್ಟರ್ ಸಂಡೇ ದಿನ ನಡೆಇದ್ದ ಸರಣಿ ಸ್ಪೋಟದಲ್ಲಿ ಭಾರತದಲ್ಲಿ ಬಂಧಿಸಿರುವ ಸಿರಿಯಾ ಮೂಲದ ಇಸ್ಲಾಮಿಕ್ ಸ್ಟೇಟ್ಸ್ (ಇಸಿಸ್) ಸಂಘಟನೆಯ ವ್ಯಕ್ತಿಗಳ ಕೈವಾಡವಿದೆಯೆ ಎನ್ನುವುದನ್ನು ಪತ್ತೆ ಮಾಡಲು....

Published: 31st May 2019 12:00 PM  |   Last Updated: 31st May 2019 09:30 AM   |  A+A-


File Image

ಶ್ರೀಲಂಕಾ ಸ್ಪೋಟದ ಸಂಗ್ರಹ ಚಿತ್ರ

Posted By : RHN RHN
Source : The New Indian Express
ಬೆಂಗಳೂರು: ಶ್ರೀಲಂಕಾದಲ್ಲಿ ಈಸ್ಟರ್ ಸಂಡೇ ದಿನ ನಡೆಇದ್ದ ಸರಣಿ ಸ್ಪೋಟದಲ್ಲಿ ಭಾರತದಲ್ಲಿ ಬಂಧಿಸಿರುವ ಸಿರಿಯಾ ಮೂಲದ ಇಸ್ಲಾಮಿಕ್ ಸ್ಟೇಟ್ಸ್ (ಇಸಿಸ್) ಸಂಘಟನೆಯ ವ್ಯಕ್ತಿಗಳ ಕೈವಾಡವಿದೆಯೆ ಎನ್ನುವುದನ್ನು ಪತ್ತೆ ಮಾಡಲು  ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತಂಡ ಕೊಲಂಬೋಗೆ ತೆರಳಿದೆ. ಮೇ 28ರಿಂದ ತನಿಖಾ ತಂಡ ಶ್ರೀಲಂಕಾದಲ್ಲಿದೆ.

ಇನ್ಸ್ ಪೆಕ್ಟರ್ ಜನರಲ್ ಆಫ್ ಪೋಲೀಸ್ ನ ಅಧಿಕಾರಿಯೊಬ್ಬರು ಎನ್ಐಎ ತಂಡವನ್ನು ಕೊಲಂಬೊಗೆ ಕರೆದೊಯ್ದಿದ್ದು ಬಂಧಿತ ಐಸಿಸ್ ಶಂಕಿತರಲ್ಲಿ ಯಾರಾದರೂ ಕೊಲಂಬೋ ಸ್ಪೋಟದಲ್ಲಿ ಭಾಗಿಗಳಾಗಿದ್ದರೆ ಎನ್ನುವ ಕುರಿತು ತನಿಖೆ ಕೈಗೊಂಡಿದ್ದಾರೆ. ಕೇರಳದಲ್ಲಿ ಆತ್ಮಹತ್ಯೆ ದಾಳಿ ನಡೆಸಲು ಸಂಚು ರೂಪಿಸಿದ್ದಕ್ಕಾಗಿ ಇಸಿಸ್ಸಂಘಟನೆಯ ಶಂಕಿತ ಉಗ್ರ ಪಾಲಕ್ಕಾಡ್ ನಿವಾಸಿ ರಿಯಾಸ್ ಎ ಅಲಿಯಾಸ್ ರಿಯಾಸ್ ಅಬೂಬಕರ್ ಅಲಿಯಾಸ್ ಅಬು ದುಜಾನಾ (29) ಅವನನ್ನು ಬಂಧಿಸಲಾಗಿದೆ.

"ಈಸ್ಟರ್ ಬಾಂಬ್ ಸ್ಫೋಟದಲ್ಲಿ ಶ್ರೀಲಂಕಾದ ಜಹ್ರಾನ್ ಹಶಿಮ್ ಸಂಘಟನೆ ಕೈವಾಡವಿದ್ದು 253 ಜನ ಸಾವನ್ನಪ್ಪಿದ್ದರೆ 500 ಕ್ಕಿಂತಲೂ ಹೆಚ್ಚು ಜನರು ಗಾಯಗೊಂಡಿದ್ದಾರೆ  ಈ ಕೃತ್ಯದಲ್ಲಿ ಕೇರಳದಲ್ಲಿ ಆತ್ಮಹತ್ಯೆ ದಾಳಿ ನಡೆಸಲು ಯೋಜಿಸಿದ್ದ ಇಸಿಸ್ ಉಗ್ರರಕೈವಾಡದ ಬಗ್ಗೆ ಸಂಶಯವಿದೆ." ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಎನ್ಐಎ ತಂಡವುಶ್ರೀಲಂಕಾದ ಆತ್ಮಹತ್ಯೆ ಬಾಂಬರುಗಳಾದ ಇಬ್ಬರು ಸಹೋದರರ ಪ್ರಯಾಣದ ವಿವರಗಳನ್ನು ಕಲೆಹಾಕಲಿದೆ.ಈಸ್ಟರ್ ಬೆಳಿಗ್ಗೆ ಶಾಂಂಗ್ರಿ-ಲಾ ಮತ್ತು ಸಿನ್ನಮೋನ್ ಗ್ರ್ಯಾಂಡ್ ಹೋಟೆಲ್ ನಲ್ಲಿ ನಡೆಸಿದ್ದ ದಾಳಿ ಕುರಿತು ಮಾಹಿತಿ ಪಡೆಯಲಾಗುವುದು ಎಂದು ವರದಿಯಾಗಿದೆ. ಈ ಹಿಂದೆ  2012 ರ ವ್ಯವಹಾರ ವೀಸಾದಲ್ಲಿ ಅವರು ಭಾರತಕ್ಕೆ ಭೇಟಿ ಕೊಟ್ಟಿದ್ದರು. ಬೆಂಗಳೂರು, ಕೊಚ್ಚಿ, ಚೆನ್ನೈ, ಮುಂಬೈ ಮತ್ತು ದೆಹಲಿಗಳಿಗೆ ವ್ಯಾಪಾರ ಸಂಬಂಧಿ ಕೆಲಸಕ್ಕಾಗಿ ಅವರು ಆಗಮಿಸಿದ್ದರು.

"ಶ್ರೀಲಂಕಾದ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಮಹೇಶ್ ಸೇನನಾಯಕೆ ಆರೋಪಿಸಿರುವಂತೆ ಅವರು ಇಲ್ಲಿ ಯಾವುದೇ ರೀತಿಯ ತರಬೇತಿಯಲ್ಲಿ ಪಾಲ್ಗೊಂಡಿಲ್ಲ"  ಎಂದು ಹೆಸರು ಹೇಳಲಿಚಿಸದ ಮೂಲಗಳಿಂದ ಪತ್ರಿಕೆಗೆ ಮಾಹಿತಿ ಲಭಿಸಿದೆ.ಅಧಿಕೃತ ನಿಯೋಗವು ಗುಜರಾತಿನ ಎರಡು ಆರೋಪಿ ಐಎಸ್ಐಎಸ್ ಶಂಕಿತರ 2017 ಚಾರ್ಜ್ ಶಿಟ್ ನ ವಿವರಗಳನ್ನು ಹಂಚಿಕೊಳ್ಲಲಾಗಿದೆ ಎಂದು ಮಾದ್ಯಮ ವರದಿ ಹೇಳಿದೆ. ವರದಿ ಪ್ರಕಾರ, ಸಾಮಾಜಿಕ ಮಾಧ್ಯಮದ ವೇದಿಕೆಗಳಲ್ಲಿ ಶ್ರೀಲಂಕಾದ ಸಾಫ್ಟ್ವೇರ್ ಇಂಜಿನಿಯರ್  ಒಬ್ಬರು ಉಗ್ರವಾದ ಸಂಬಂಧಿ ಸಂದೇಶ ರವಾನಿಸಿದ್ದರು.

ಏಪ್ರಿಲ್ 21 ರಂದು ಬಾಂಬರ್ ಗಳಿಗೆ  ತಾಂತ್ರಿಕ ಮತ್ತು ಲಾಜಿಸ್ಟಿಕ್ ಬೆಂಬಲವನ್ನು ನೀಡಿದ್ದಕ್ಕಾಗಿ ಅವರನ್ನು ಬಂಧಿಸಲಾಗಿದೆ.ಇಸಿಸ್  ಸಂಬಂಧಿತ ಪ್ರಕರಣಗಳಲ್ಲಿ ಆಪಾದಿತ ಪಾಲ್ಗೊಳ್ಳುವಿಕೆಯಿಂದ ದೇಶಾದ್ಯಂತ 100 ಕ್ಕೂ ಹೆಚ್ಚು ಜನರನ್ನು ಎನ್ಐಎ ಬಂಧಿಸಿದೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp