ಕಾಶ್ಮೀರದಲ್ಲಿ 'ಅಸ್ಥಿರತೆ' ಇದೆ, ಅದು ಶೀಘ್ರವೇ ಬದಲಾಗಬೇಕು: ಏಂಜೆಲಾ ಮರ್ಕೆಲ್ ಕಳವಳ

ಕಾಶ್ಮೀರದ ಪ್ರಸ್ತುತ ಪರಿಸ್ಥಿತಿ "ಸುಸ್ಥಿರ"ವಾಗಿಲ್ಲ ಹಾಗೂ ಖಚಿತವಾಗಿ ಬದಲಾಗಬೇಕಾಗಿದೆ ಎಂದು ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಹೇಳಿದ್ದಾರೆ.
ಪ್ರಧಾನಿ ಮೋದಿಯನ್ನು ಭೇಟಿಯಾದ ಏಂಜೆಲಾ ಮರ್ಕೆಲ್
ಪ್ರಧಾನಿ ಮೋದಿಯನ್ನು ಭೇಟಿಯಾದ ಏಂಜೆಲಾ ಮರ್ಕೆಲ್

ನವದೆಹಲಿ: ಕಾಶ್ಮೀರದ ಪ್ರಸ್ತುತ ಪರಿಸ್ಥಿತಿ "ಸುಸ್ಥಿರ"ವಾಗಿಲ್ಲ ಹಾಗೂ ಖಚಿತವಾಗಿ ಬದಲಾಗಬೇಕಾಗಿದೆ ಎಂದು ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಹೇಳಿದ್ದಾರೆ.ನಿಯೋಗದೊಂದಿಗೆ ಭಾರತಕ್ಕೆ ಆಗಮಿಸಿದ ಜರ್ಮನ್ ಪತ್ರಕರ್ತರೊಡನೆ ಮಾತನಾಡಿದ ಮರ್ಕೆಲ್ "ಕಾಶ್ಮೀರದ ಸಧ್ಯದ ಸ್ಥಿತಿ "ಸ್ಥಿರತೆ"ಯಿಂದ ಕೂಡಿಲ್ಲ. ಅದು ಅಸ್ಥಿರತೆಯಿಂದ ಕೂಡಿದ್ದು ಶೀಘ್ರವೇ ಬದಲಾಗಬೇಕಿರುವುದು ಅಗತ್ಯ ಎಂದಿದ್ದಾರೆ.

ಆದಾಗ್ಯೂ ಐಜಿಸಿಯಲ್ಲಿ ಕಾಶ್ಮೀರ ಪರಿಸ್ಥಿತಿಯನ್ನು ಕುರಿತಂತೆ ಚರ್ಚಿಸಿಲ್ಲ ಎನ್ನಲಾಗಿದೆ. "ಈ ಕ್ಷಣದಲ್ಲಿ (ಕಾಶ್ಮೀರದಲ್ಲಿ) ಪರಿಸ್ಥಿತಿ ಸುಸ್ಥಿರವಾಗಿಲ್ಲ ಮತ್ತು ಒಳ್ಳೆಯದಲ್ಲ, ಇದು ಖಚಿತವಾಗಿ ಬದಲಾಗಬೇಕಾಗಿದೆ "ಎಂದು ಅವರು ಹೇಳಿದರೆಂದು ಜರ್ಮನಿ ಮೂಲಗಳು ಹೇಳಿದೆ.

ಆಗಸ್ಟ್ ನಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಳ್ಳಲು ಸರ್ಕಾರ 370 ನೇ ವಿಧಿಯನ್ನು ರದ್ದುಪಡಿಸಿ ಬಳಿಕ ಹೇರಿರುವ ಹೊಸ ನಿರ್ಬಂಧಗಳ ಬಗೆಗೆ ಯುಎಸ್ ಸೇರಿದಂತೆ ಕೆಲವು ವಿದೇಶಿ ನಾಯಕರು ಕ್ತಪಡಿಸಿದ ಕಳವಳಗಳ ನಡುವೆ ಜರ್ಮನ್ ಚಾನ್ಸೆಲರ್ ಈ ಬಗೆಯಲ್ಲಿ ತಮ್ಮ ನಿಲುವನ್ನು ಹೇಳಿದ್ದಾರೆ.

ಭಾರತ ಪ್ರವಾಸದಲ್ಲಿರುವ ಜರ್ಮನಿ ಚಾನ್ಸಲರ್ ಶುಕ್ರವಾರ ನಿಯೋಗ ಮಟ್ಟದ ಮಾತುಕತೆಯ ನಂತರ, ಉಭಯ ನಾಯಕರು ಪ್ರಧಾನ ಮಂತ್ರಿಯ ಅಧಿಕೃತ ನಿವಾಸದಲ್ಲಿ ಆಯ್ದ ಮಂತ್ರಿಗಳು ಮತ್ತು ಎರಡೂ ಕಡೆಯ ಅಧಿಕಾರಿಗಳ ಸಮ್ಮುಖದಲ್ಲಿ 'ನಿರ್ಬಂಧಿತ ಸಭೆ' ನಡೆಸಿದರು. ಸಭೆಯಲ್ಲಿ ವಿದೇಶ ವ್ಯವಹಾರಗಳ ಸಚಿವ ಎಸ್.ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಭಾರತದ ಪರ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com