ಸೆಕ್ಸ್‌ಗೆ ಪತ್ನಿ ನಿರಾಕರಿಸಿದ್ದಕ್ಕೆ 2 ತಿಂಗಳ ಮಗುವನ್ನು ಕೊಂದ ಕಿರಾತಕ!

ಸೆಕ್ಸ್‌ಗೆ ಪತ್ನಿ ನಿರಾಕರಿಸಿದ್ದಕ್ಕೆ ಕೋಪಗೊಂಡ ಪತಿಯೊಬ್ಬ ತನ್ನದೇ ಕರುಳ ಬಳ್ಳಿಯನ್ನೇ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚೆನ್ನೈ: ಸೆಕ್ಸ್‌ಗೆ ಪತ್ನಿ ನಿರಾಕರಿಸಿದ್ದಕ್ಕೆ ಕೋಪಗೊಂಡ ಪತಿಯೊಬ್ಬ ತನ್ನದೇ ಕರುಳ ಬಳ್ಳಿಯನ್ನೇ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಚೆನ್ನೈನ ಕೆಕೆ ನಗರದ ನಿವಾಸಿ ಎಂ ಇಳಪ್ಪನ್ 2 ತಿಂಗಳ ಹೆಣ್ಣು ಮಗುವನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

ಕುಡಿದು ಮನೆಗೆ ಬಂದಿದ್ದ ಇಳಪ್ಪನ್ ಕಳೆದ ಬುಧವಾರ ರಾತ್ರಿ ಪತ್ನಿಯನ್ನು ಸೆಕ್ಸ್ ಗೆ ಒತ್ತಾಯಿಸಿದ್ದಾನೆ. ಮಗುವಿಗೆ ಜನ್ಮ ನೀಡಿ ಸ್ವಲ್ಪ ನಿತ್ರಾಣಗೊಂಡಿದ್ದ ಪತ್ನಿ ದುರ್ಗಾ ಸೆಕ್ಸ್ ಗೆ ಒಲ್ಲೆ ಅಂದಿದ್ದಾಳೆ. 

ಇನ್ನು ಮಗುವನ್ನು ಎತ್ತಿಕೊಂಡಿದ್ದ ಪತ್ನಿಯನ್ನು ಬಲವಂತ ಮಾಡುವಾಗ ಮಗು ತಾಯಿಯ ಕೈ ಜಾರಿ ನೆಲಕ್ಕೆ ಬಿದ್ದಿದೆ. ಈ ವೇಳೆ ಮಗುವಿನ ತಲೆಗೆ ಗಂಭೀರ ಗಾಯಗಳಾಗಿತ್ತು. ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com