ಮಗುವನ್ನು ಜೀವಂತವಾಗಿ ಹೂಳಲು ಯತ್ನ: ಪೊಲೀಸರಿಂದ ಇಬ್ಬರ ಬಂಧನ

ಮಗುವನ್ನು ಜೀವಂತವಾಗಿ ಹೂಳಲು ಯತ್ನಿಸಿದ್ದ ಇಬ್ಬರನ್ನು ಬಂಧಿಸಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.  

Published: 01st November 2019 12:34 PM  |   Last Updated: 01st November 2019 12:34 PM   |  A+A-


Two Arrested For Trying To Bury Baby Alive

ಜೀವಂತ ಮಗು ಊಳಲು ಯತ್ನಿಸಿದವರ ಬಂಧನ

Posted By : Shilpa D
Source : Online Desk

ಹೈದರಾಬಾದ್: ಮಗುವನ್ನು ಜೀವಂತವಾಗಿ ಹೂಳಲು ಯತ್ನಿಸಿದ್ದ ಇಬ್ಬರನ್ನು ಬಂಧಿಸಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.  

ಗುರುವಾರ ಬೆಳಗ್ಗೆ ಜ್ಯುಬಿಲಿ ಬಸ್ ನಿಲ್ದಾಣದ ಮೈದಾನದಲ್ಲಿ ಇಬ್ಬರು ವ್ಯಕ್ತಿಗಳು ಬ್ಯಾಗ್ ವೊಂದನ್ನು ಹಿಡಿದು ನಿಂತಿರುವುದನ್ನು ರಿಕ್ಷಾ ಚಾಲಕರೊಬ್ಬರು ಗಮನಿಸಿದ್ದರು. ಅಲ್ಲದೇ ಅವರು ಮೈದಾನದಲ್ಲಿ ಗುಂಡಿ ತೋಡುತ್ತಿರುವುದನ್ನು ಗಮನಿಸಿದ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ

ಕೂಡಲೇ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದಾಗ ಬ್ಯಾಗ್ ನಲ್ಲಿ ಮಗು ಇರುವುದು ಪತ್ತೆಯಾಗಿತ್ತು. ಬಳಿಕ ಕರೀಂನಗರ್ ಜಿಲ್ಲೆಯ ನಿವಾಸಿಗಳಾದ ಇಬ್ಬರನ್ನು ವಿಚಾರಣೆಗೊಳಪಡಿಸಿದಾಗ, ಇದು ತನ್ನ ಮೊಮ್ಮಗಳು, ಇತ್ತೀಚೆಗಷ್ಟೇ ಆಪರೇಶನ್ ಮಾಡಿದ್ದರೂಅದು ಫಲಕಾರಿಯಾಗದೆ ಸಾವನ್ನಪ್ಪಿದೆ.

ಅಲ್ಲದೇ ಮೃತದೇಹವನ್ನು ಸಾರ್ವಜನಿಕ ಸಾರಿಗೆಯಲ್ಲಿ ತರಲು ಅನುಮತಿ ನೀಡುವುದಿಲ್ಲ. ಹೀಗಾಗಿ ಮೈದಾನದಲ್ಲಿ ಶವ ಹೂಳಲು ಬಂದಿರುವುದಾಗಿ ತಿಳಿಸಿದ್ದರು.

ಆದರೆ ಚೀಲದಿಂದ ಮಗುವನ್ನು ಹೊರತೆಗೆದು ಪೊಲೀಸರು ಪರಿಶೀಲಿಸಿದಾಗ ಮಗು ಜೀವಂತಾಗಿತ್ತು! ಬಳಿಕ ಮಗುವನ್ನು ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದು, ಇಬ್ಬರನ್ನೂ ಪೊಲೀಸರು ಬಂಧಿಸಿ ಮುಂದಿನ ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp