ತಂಗಿ ಸ್ನಾನ ಮಾಡುವ ವೀಡಿಯೋವನ್ನು ಪ್ರಿಯಕರನೊಡನೆ ಹಂಚಿಕೊಂಡ ಸಹೋದರಿ!

ತಂಗಿ ಸ್ನಾನ ಮಾಡುತ್ತಿರುವಾಗ ಅದನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿ ತನ್ನ ಪ್ರಿಯಕರನಿಗೆ ಕಳಿಸಿದ 25 ವರ್ಷದ ಯುವತಿಯನ್ನು ಮುಂಬೈ ಪೋಲೀಸರು ಬಂಧಿಸಿದ್ದಾರೆ.

Published: 01st November 2019 08:34 PM  |   Last Updated: 01st November 2019 08:34 PM   |  A+A-


ಸಂಗ್ರಹ ಚಿತ್ರ

Posted By : Raghavendra Adiga
Source : Online Desk

ಮುಂಬೈ: ತಂಗಿ ಸ್ನಾನ ಮಾಡುತ್ತಿರುವಾಗ ಅದನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿ ತನ್ನ ಪ್ರಿಯಕರನಿಗೆ ಕಳಿಸಿದ 25 ವರ್ಷದ ಯುವತಿಯನ್ನು ಮುಂಬೈ ಪೋಲೀಸರು ಬಂಧಿಸಿದ್ದಾರೆ.

ಬೈಕುಲ್ಲಾ  ನಿವಾಸಿಯಾಗಿರುವ ತನ್ನ ಸೋದರಿ 20ರ ಹರೆಯದ ಯುವತಿಯ ಸ್ನಾನದ ದೃಶ್ಯಗಳನ್ನು ಚಿತ್ರೀಕರಿಸಿ ತನ್ನ ಪ್ರಿಯಕರನಿಗೆ ಕಳಿಸಿದ ಕಾರಣ ಸಂತ್ರಸ್ಥೆ ತನ್ನ ಅಕ್ಕನ ವಿರುದ್ಧ ಪೋಲೀಸರಿಗೆ ದೂರು ಸಲ್ಲಿಸಿದ್ದಾಳೆ. ದೂರು ಸ್ವೀಕರಿಸಿದ ಅಗ್ರಿಪಾದಾ ಪೋಲೀಸರು ಆರೋಪಿ ಯುವತಿಯನ್ನು ಬಂಧಿಸಿದ್ದಾರೆ.

ಆರೋಪಿ ಯುವತಿ ತನ್ನ ಪ್ರಿಯಕರನಿಗೆ ವಿಡಿಯೋ ಕರೆ ಮಾಡಿ ಸಹೋದರಿ ಸ್ನಾನ ಮಾಡಿದ್ದನ್ನು ತೋರಿಸಿದ್ದಾಳೆ, ಆ ವ್ಯಕ್ತಿಯು ಕರೆ ಸಮಯದಲ್ಲಿ ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಂಡು, ತನ್ನ ಮೊಬೈಲ್ ಫೋನ್‌ನಲ್ಲಿ ಉಳಿಸಿ ನಂತರ ಸಂತ್ರಸ್ತೆಯ ಸಂಬಂಧಿಕರೊಂದಿಗೆ ಹಂಚಿಕೊಂಡಿದ್ದಾನೆ  ಎಂದು ಪೋಲೀಸರು ಹೇಳಿದ್ದಾರೆ.

ಆತ ತನ್ನ ಗೆಳತಿಗೆ ಆಕೆಯ ಸೋದರಿಯ ಅಶ್ಲೀಲ ದೃಶ್ಯಗಳನ್ನು ಸೆರೆಹಿಡಿಯುವಂತೆ ಒತ್ತಾಯಿಸಿದ್ದ. ಇದಕ್ಕೆ ಪ್ರತಿಯಾಗಿ ತಾನು ಆಕೆಯನ್ನು ವಿವಾಹವಾಗುವುದಾಗಿ ಭರವಸೆ ನೀಡಿದ್ದ.  ಇದು ಸೇಡು ತೀರಿಸಿಕೊಳ್ಳುವ ಕ್ರಮ ಎನ್ನಲಾಗಿದ್ದು ಈ ಹಿಂದೆ ನವರಾತ್ರಿ ಆಚರಣೆ ವೇಳೆ ಸಂತ್ರಸ್ಥೆಯು ತನ್ನ ಅಕ್ಕನ ಗೆಳೆಯನಾದ ಈ ವ್ಯಕ್ತಿಯನ್ನು ಅವಮಾನಿಸಿದ್ದಳು ಎಂದು ತಿಳಿದುಬಂದಿದೆ.

ಇದೀಗ ಆರೋಪಿ ಯುವತಿ ಃಆಗೂ ಆಕೆಯ ಗೆಳೆಯನ ವಿರುದ್ಧ ದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 (ಸಿ) (ವಾಯ್ಯುರಿಸಮ್), 34 (ಕಾಮನ್ ಇಂಟೆನ್ಷನ್)ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ  ಪ್ರಕರಣ ದಾಖಲಾಗಿದೆ.ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದು ಕಣ್ಮರೆಯಾಗಿರುವ ಆಕೆಯ ಗೆಳಯನಿಗಾಗಿ ಶೋಧಕಾರ್ಯ ನಡೆದಿದೆ ಎಂದು ಪೋಲೀಸರು ಹೇಳಿದ್ದಾರೆ. 

Stay up to date on all the latest ರಾಷ್ಟ್ರೀಯ news
Poll
Rohit Sharma

ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯು ಟೀಮ್ ಇಂಡಿಯಾದ ಸಾಧನೆಯ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp