ರಾಜಧಾನಿ ದೆಹಲಿ ವಿಮಾನ ನಿಲ್ದಾಣದಲ್ಲಿ ಆರ್'ಡಿಎಕ್ಸ್ ಪತ್ತೆ: ಜನತೆಯಲ್ಲಿ ಆತಂಕ

ರಾಷ್ಟ್ರ ರಾಜಧಾನಿ ದೆಹಲಿಯ ಇಂದಿರಾಗಾಂಧಿ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಬೆಳಗಿನ ಜಾವ ಅನುಮಾನಾಸ್ಪದ ಬ್ಯಾಗ್'ವೊಂದು ಪತ್ತೆಯಾಗಿದ್ದು, ಬ್ಯಾಗ್ ನಲ್ಲಿ ಆರ್'ಡಿಎಕ್ಸ್ ಪತ್ತೆಯಾಗಿದೆ ಎಂದು ವರದಿಗಳು ತಿಳಿಸಿವೆ. 
ರಾಜಧಾನಿ ದೆಹಲಿ ವಿಮಾನ ನಿಲ್ದಾಣದಲ್ಲಿ ಆರ್'ಡಿಎಕ್ಸ್ ಪತ್ತೆ: ಜನತೆಯಲ್ಲಿ ಆತಂಕ
ರಾಜಧಾನಿ ದೆಹಲಿ ವಿಮಾನ ನಿಲ್ದಾಣದಲ್ಲಿ ಆರ್'ಡಿಎಕ್ಸ್ ಪತ್ತೆ: ಜನತೆಯಲ್ಲಿ ಆತಂಕ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಇಂದಿರಾಗಾಂಧಿ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಬೆಳಗಿನ ಜಾವ ಅನುಮಾನಾಸ್ಪದ ಬ್ಯಾಗ್'ವೊಂದು ಪತ್ತೆಯಾಗಿದ್ದು, ಬ್ಯಾಗ್ ನಲ್ಲಿ ಆರ್'ಡಿಎಕ್ಸ್ ಪತ್ತೆಯಾಗಿದೆ ಎಂದು ವರದಿಗಳು ತಿಳಿಸಿವೆ. 

ವಿಮಾನ ನಿಲ್ದಾಣದಲ್ಲಿ ಆರ್'ಡಿಎಕ್ಸ್ ಪತ್ತೆಯಾಗಿರುವ ಹಿನ್ನಲೆಯಲ್ಲಿ ಕೆಲ ಗಂಟೆಗಳ ಕಾಲ ನಿಲ್ದಾಣದಲ್ಲಿ ಪ್ರಯಾಣಿಕರ ಚಲನವಲನಕ್ಕೆ ನಿರ್ಬಂಧ ಹೇರಲಾಗಿತ್ತು. ಈ ಬೆಳವಣಿಗೆಗಳು ಜನತೆಯಲ್ಲಿ ಆತಂಕವನ್ನುಂಟು ಮಾಡಿದೆ. 
 

ವಿಮಾನ ನಿಲ್ದಾಣದ ಟರ್ಮಿನಲ್-3ರಲ್ಲಿ ಕಪ್ಪು ಬಣ್ಣದ ಬ್ಯಾಗ್ ವೊಂದು ಅನುಮಾನಾಸ್ಪದವಾಗಿ ಪತ್ತೆಯಾಗಿದ್ದು, ರಾತ್ರಿ1 ಗಂಟೆ ಸುಮಾರಿಗೆ ಸಿಐಎಸ್ಎಫ್ ಸಿಬ್ಬಂದಿ ಇದನ್ನು ಪತ್ತೆ ಮಾಡಿ ಸಂಭಾವ್ಯ ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ. 

ಬ್ಯಾಗ್'ನಲ್ಲಿ ಪತ್ತೆಯಾಗಿರುವ ವಸ್ತುವನ್ನು ಪತ್ತೆಗಾಗಿ ಪ್ರತ್ಯೇಕವಾಗಿರಿಸಲಾಗಿದ್ದು, ಬ್ಯಾಗ್ ನೊಳಗೆ ಆರ್'ಡಿಎಕ್ಸ್ ಪತ್ತೆಯಾಗಿದೆ ಎಂದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ. 

ಪ್ರಸ್ತುತ ಸ್ಥಳಕ್ಕಾಗಮಿಸಿರುವ ಸ್ಫೋಟಕ ತಜ್ಞರು ಹಾಗೂ ಶ್ವಾನದಳಗಳು ತಪಾಸಣೆ ನಡೆಸುತ್ತಿದ್ದಾರೆ. ರಾತ್ರಿ 1 ಗಂಟೆ ಸುಮಾರಿಗೆ ಕರೆಯೊಂದು ಬಂದಿದ್ದು, ಇದಾದ ಬಳಿಕ ಟರ್ಮಿನಲ್ ಗೇಟ್ ನ.2ರ ಬಳಿ ಬ್ಯಾಗ್ ಪತ್ತೆಯಾಗಿತ್ತು. ಬಳಿಕ ಭದ್ರತಾ ಸಿಬ್ಬಂದಿಗಳ ನೆರವಿನೊಂದಿಗೆ ಬ್ಯಾಗ್'ನ್ನು ತೆರವುಗೊಳಿಸಲಾಗಿತ್ತು. ಈ ವರೆಗೂ ಬ್ಯಾಗ್'ನ್ನು ತೆರೆಯಲಾಗಿಲ್ಲ. ವಿಮಾನ ನಿಲ್ದಾಣದ ಸುತ್ತಮುತ್ತಲು ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com