ಒಡಿಸಾ ಜೊತೆ 'ರಸಗುಲ್ಲಾ' ಹೋರಾಟದಲ್ಲಿ  'ಸ್ವೀಟ್ 'ವಿಕ್ಟರಿ: ಬಂಗಾಳಕ್ಕೆ  ಜಿಐ ಟ್ಯಾಗ್!

ರಸಗುಲ್ಲಾದ ಜಿಯೊಗ್ರಾಫಿಕಲ್‌ ಇಂಡಿಕೇಟರ್‌ಗಾಗಿ ಪಶ್ಚಿಮ ಬಂಗಾಳ ಮತ್ತು ಒಡಿಸಾ ರಾಜ್ಯಗಳು ಕೋರ್ಟ್‌ ಮೆಟ್ಟಿಲೇರಿದ್ದವು, ಜಿಯೊಗ್ರಾಫಿಕಲ್‌ ಇಂಡಿಕೇಟರ್‌ಗಾಗಿ ಎರಡು ರಾಜ್ಯಗಳ ಮಧ್ಯೆ ನಡೆಯುತ್ತಿದ್ದ ಕಾನೂನು ಹೋರಾಟದಲ್ಲಿ ,
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಲ್ಕೊತಾ:  ರಸಗುಲ್ಲಾದ ಜಿಯೊಗ್ರಾಫಿಕಲ್‌ ಇಂಡಿಕೇಟರ್‌ಗಾಗಿ ಪಶ್ಚಿಮ ಬಂಗಾಳ ಮತ್ತು ಒಡಿಸಾ ರಾಜ್ಯಗಳು ಕೋರ್ಟ್‌ ಮೆಟ್ಟಿಲೇರಿದ್ದವು, ಜಿಯೊಗ್ರಾಫಿಕಲ್‌ ಇಂಡಿಕೇಟರ್‌ಗಾಗಿ ಎರಡು ರಾಜ್ಯಗಳ ಮಧ್ಯೆ ನಡೆಯುತ್ತಿದ್ದ ಕಾನೂನು ಹೋರಾಟದಲ್ಲಿ ಪಶ್ಚಿಮ ಬಂಗಾಳಕ್ಕೆ ಜಿಐ ಟ್ಯಾಗ್ ಸಿಕ್ಕು ಗೆದ್ದಿದೆ.

ಪಶ್ಚಿಮ ಬಂಗಾಳಕ್ಕೆ ಬಾಂಗ್ಲಾರ್ ರಸಗುಲ್ಲಾ ಎಂಬ ಜಿಐ ಟ್ಯಾಗ್ ದೊರೆತಿದೆ, 2018ರ ಫೆಬ್ರವರಿಯಲ್ಲಿ , ಒಡಿಸ್ಸಾದ ಪ್ರಾದೇಶಿಕ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ರಮೇಶ್ ಚಂದ್ರ ಸಾಹೋ ಬಂಗಾಳದ ಜಿಐ ನೋಂದಣಿಯನ್ನು ರದ್ದುಗೊಳಿಸಬೇಕೆಂದು ಪಿಟಿಸನ್ ಸಲ್ಲಿಸಿದ್ದರು.

ಆದರೆ ಅಕ್ಟೋಬರ್ 31 ರಂದು ಒಡಿಸಾ ಅದಕ್ಕೆ ಪೂರಕ ಸಾಕ್ಷಿ ಒದಗಿಸಬೇಕೆಂದು ಕೋರ್ಟ್ ಸೂಚಿಸಿತ್ತು, ಆದರೆ ಸೂಕ್ತ ಸಮಯದಲ್ಲಿ ಅಗತ್ಯ ದಾಖಲಾತಿಗಳನ್ನು ಒದಗಿಸದ ಕಾರಣ ಒಡಿಸ್ಸಾ ಮೂಲದ ವ್ಯಕ್ತಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಲಾಗಿದೆ. 

ರಸಗುಲ್ಲಾ ಬಂಗಾಳ ಜನತೆಯ ಅನ್ವೇಷಣೆಯ ಸಿಹಿ ಖಾದ್ಯ ಎಂಬುದು ಅಧಿಕೃತವಾಗಿದೆ. ರಸಗುಲ್ಲಾ ಅನ್ವೇಷಣೆಯ ಮಾನ್ಯತೆಗೆ ಒಡಿಶಾ ಹಾಗೂ ಪಶ್ಚಿಮ ಬಂಗಾಳದ ನಡುವೆ 2015 ರಿಂದ ಸಮರ ನಡೆಯುತ್ತಿತ್ತು. ಮೊದಲಿಗೆ ನವೀನ್‌ಚಂದ್ರ ದಾಸ್‌ ರಸಗುಲ್ಲಾ ತಯಾರಿಸಿದ್ದರು ಎಂಬುದು ಪಶ್ಚಿಮ ಬಂಗಾಳ ಸರಕಾರದ ವಾದವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com