ಪಂಜಾಬ್‍ನಲ್ಲಿ ಕೃಷಿ ತ್ಯಾಜ್ಯ ಸುಟ್ಟ 96 ರೈತರ ವಿರುದ್ಧ ಪ್ರಕರಣ ದಾಖಲು, 5 ಲಕ್ಷ ರೂ.ದಂಡ

ಪಂಜಾಬ್ ನ ಮೋಗಾ ಜಿಲ್ಲೆಯಲ್ಲಿ ಕೃಷಿ ತ್ಯಾಜ್ಯ ಸುಟ್ಟಿದ್ದ 96 ರೈತರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು 5 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. 
ಪಂಜಾಬ್‍ನಲ್ಲಿ ಕೃಷಿ ತ್ಯಾಜ್ಯ ಸುಟ್ಟ 96 ರೈತರ ವಿರುದ್ಧ ಪ್ರಕರಣ ದಾಖಲು, 5 ಲಕ್ಷ ರೂ.ದಂಡ
ಪಂಜಾಬ್‍ನಲ್ಲಿ ಕೃಷಿ ತ್ಯಾಜ್ಯ ಸುಟ್ಟ 96 ರೈತರ ವಿರುದ್ಧ ಪ್ರಕರಣ ದಾಖಲು, 5 ಲಕ್ಷ ರೂ.ದಂಡ

ಮೋಗಾ: ಪಂಜಾಬ್ ನ ಮೋಗಾ ಜಿಲ್ಲೆಯಲ್ಲಿ ಕೃಷಿ ತ್ಯಾಜ್ಯ ಸುಟ್ಟಿದ್ದ 96 ರೈತರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು 5 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. 

ಜಿಲ್ಲೆಯಲ್ಲಿ ಕೃಷಿ ತ್ಯಾಜ್ಯ ಸುಡುವುದನ್ನು ತಡೆಯಲು ಪಂಜಾಬ್‍ ಕೃಷಿ ಕಾರ್ಯದರ್ಶಿ ಕಹಾನ್ ಸಿಂಗ್ ಪನ್ನು ಅವರ ನಿರ್ದೇಶನದಂತೆ ನ ಕೃಷಿ ಇಲಾಖೆಯ 20 ತಂಡಗಳು ಶನಿವಾರ ಮಧ್ಯಾಹ್ನ ರೈತರ ಹೊಲಗಳಿಗೆ ಭೇಟಿ ನೀಡಿದ್ದವು. 

ಕೃಷಿ ತ್ಯಾಜ್ಯ ಸುಡುವುದನ್ನು ತಡೆಯುವ ನಿಟ್ಟಿನಲ್ಲಿ ಯಾವುದೇ ಅಧಿಕಾರಿ ರಜೆ ಮೇಲೆ ಹೋಗಲು ಅನುಮತಿ ನಿರಾಕರಿಸಲಾಗಿದೆ. ನಿರ್ದೇಶಕ ಮತ್ತು ಜಂಟಿ ನಿರ್ದೇಶಕ ಮಟ್ಟದ ಅಧಿಕಾರಿಗಳು ಸಹ ಕ್ಷೇತ್ರದಲ್ಲಿ ಕರ್ತವ್ಯದಲ್ಲಿರಬೇಕು ಎಂದು ಇಲಾಖೆ ನಿರ್ದೇಶಿಸಿದೆ ಅಧಿಕೃತ ಮಾಹಿತಿ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com