ಮಿತಿಮೀರಿದ ವಾಯು ಮಾಲಿನ್ಯ: ದೆಹಲಿ, ಪಂಜಾಬ್, ಹರಿಯಾಣ ಸಿಎಂಗಳ ಸಭೆ ಕರೆಯುವಂತೆ ಕೇಂದ್ರಕ್ಕೆ ಖಟ್ಟರ್ ಮನವಿ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಮಿತಿ ಮೀರಿದ್ದು, ತುರ್ತು ಕ್ರಮ ಕೈಗೊಳ್ಳುವ ಕುರಿತು ಚರ್ಚಿಸಲು ನೆರೆ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯುವಂತೆ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್...
ದೆಹಲಿ ಮಾಲಿನ್ಯ
ದೆಹಲಿ ಮಾಲಿನ್ಯ

ಚಂಡೀಗಢ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಮಿತಿ ಮೀರಿದ್ದು, ತುರ್ತು ಕ್ರಮ ಕೈಗೊಳ್ಳುವ ಕುರಿತು ಚರ್ಚಿಸಲು ನೆರೆ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯುವಂತೆ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಈ ಸಂಬಂಧ ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಪತ್ರ ಬರೆದಿರುವ ಖಟ್ಟರ್ ಅವರು, ದೆಹಲಿ, ಪಂಜಾಬ್ ಹಾಗೂ ಹರಿಯಾಣ ಮುಖ್ಯಮಂತ್ರಿಗಳ ಜಂಟೆ ಸಭೆ ಕರೆಯುವಂತೆ ಮನವಿ ಮಾಡಿದ್ದಾರೆ.

ಮಾಲಿನ್ಯ ವಿಚಾರದಲ್ಲೂ ಕೀಳು ಮಟ್ಟದ ರಾಜಕೀಯ ಮಾಡಲಾಗುತ್ತಿದೆ ಎಂದು ನೇರವಾಗಿ ಯಾರ ಹೆಸರು ಪ್ರಸ್ತಾಪಿಸದೆ ದೆಹಲಿ ಹಾಗೂ ಪಂಜಾಬ್ ಸಿಎಂಗಳ ವಿರುದ್ಧ ಖಟ್ಟರ್ ಕಿಡಿ ಕಾರಿದ್ದಾರೆ.

ದೆಹಲಿಯಲ್ಲಿ ಜೀವ ವಾಯುವಿನ ಮಾಲಿನ್ಯದ ಗುಣಮಟ್ಟ ಸೂಚ್ಯಂಕ 500ರ ಗಡಿ ದಾಟಿದ್ದು, “ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ” ಘೋಷಿಸಲಾಗಿದೆ. ಅಲ್ಲದೆ, ನವೆಂಬರ್ 05ರ ವರೆಗೆ ಶಾಲೆಗಳಿಗೆ ರಜೆ ಘೋಷಿಸಲಾಗಿದ್ದು, ಕಟ್ಟಡ ನಿರ್ಮಾಣ ಕೆಲಸಗಳಿಗೂ ತಾತ್ಕಾಲಿಕ ನಿಷೇಧ ಹೇರಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com