ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಯಾರೊಬ್ಬರ ಜೊತೆ ಮಾತುಕತೆ ನಡೆಸಿಲ್ಲ- ಮಲ್ಲಿಕಾರ್ಜುನ ಖರ್ಗೆ
ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಶಿವಸೇನೆ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ವಿಳಂಬವಾಗುತ್ತಿರುವಂತೆ ಸರ್ಕಾರ ರಚನೆ ಸಂಬಂಧ ಯಾರೊಬ್ಬರ ಜೊತೆಗೂ ಕಾಂಗ್ರೆಸ್ ಚರ್ಚೆ ನಡೆಸಿಲ್ಲ, ಪ್ರತಿಪಕ್ಷ ಸ್ಥಾನದಲ್ಲಿ ಕೂರಲು ಜನಾದೇಶ ಇರುವುದಾಗಿ ಹೇಳಿದ್ದಾರೆ.
Published: 02nd November 2019 07:40 PM | Last Updated: 02nd November 2019 07:40 PM | A+A A-

ಮಲ್ಲಿಕಾರ್ಜುನ ಖರ್ಗೆ
ಬೆಂಗಳೂರು: ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಶಿವಸೇನೆ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ವಿಳಂಬವಾಗುತ್ತಿರುವಂತೆ ಸರ್ಕಾರ ರಚನೆ ಸಂಬಂಧ ಯಾರೊಬ್ಬರ ಜೊತೆಗೂ ಕಾಂಗ್ರೆಸ್ ಚರ್ಚೆ ನಡೆಸಿಲ್ಲ, ಪ್ರತಿಪಕ್ಷ ಸ್ಥಾನದಲ್ಲಿ ಕೂರಲು ಜನಾದೇಶ ಇರುವುದಾಗಿ ಹೇಳಿದ್ದಾರೆ.
ಸರ್ಕಾರ ರಚನೆ ವಿಳಂಬ ವಿಚಾರವನ್ನು ಜನರ ಗಮನಕ್ಕೆ ತರಲಾಗುವುದು ರೈತರ ಸಮಸ್ಯೆ, ಪ್ರವಾಹ ಪರಿಹಾರ, ಶಿಕ್ಷಣ ಮತ್ತಿತರ ಜನರ ಸಮಸ್ಯೆಗಳ ನಿವಾರಣೆ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವುದಾಗಿ ಮಹಾರಾಷ್ಟ್ರ ಉಸ್ತುವಾರಿಯೂ ಆಗಿರುವ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಮೈತ್ರಿ ಹೆಸರಿನಲ್ಲಿ ಮತ ಯಾಚಿಸಿದ ಬಿಜೆಪಿ ಇದೀಗ ಅಧಿಕಾರಕ್ಕಾಗಿ ಪೈಪೋಟಿ ನಡೆಸುತ್ತಿದೆ. ಅಧಿಕಾರಕ್ಕಾಗಿ ಕರ್ನಾಟಕದಲ್ಲಿ ಮಾಡಿದಂತೆ ಏನು ಬೇಕಾದರೂ ಮಾಡುತ್ತದೆ. ಒಂದು ವೇಳೆ ಜನಾದೇಶ ಇದ್ದರೆ ಸರ್ಕಾರ ರಚಿಸಲಿ ಎಂದು ಬಿಜೆಪಿ ವಿರುದ್ಧ ಖರ್ಗೆ ವಾಗ್ದಾಳಿ ನಡೆಸಿದರು.
ಶಿವಸೇನೆ ಹಾಗೂ ಕಾಂಗ್ರೆಸ್ ಪಕ್ಷದ ಸೈದ್ದಾಂತಿಕ ವಿಚಾರಗಳು ಬೇರೆ ಬೇರೆಯಾಗಿವೆ. ನಮ್ಮ ತತ್ವ ಸಿದ್ದಾಂತ ಒಪ್ಪಿಕೊಳ್ಳುವವರ ಪರವಾಗಿ ಕೆಲಸ ಮಾಡುತ್ತೇವೆ. ಆದರೆ, ಈಗ ಬಿಜೆಪಿ ಹಾಗೂ ಶಿವಸೇನಾ ಸರ್ಕಾರ ರಚಿಸಿ ಜನರ ಸೇವೆ ಮಾಡಲಿ ಎಂದರು.