ಅಮ್ಮನಿಗೆ ವರನನ್ನು ಹುಡುಕುತ್ತಿರುವ ಮಗಳು: ಈ ವಯಸ್ಸಿನಲ್ಲಿ ತಾಯಿಗೆ ಮದುವೆ ಯಾಕೆ ಗೊತ್ತ?

ಮದುವೆ ವಯಸ್ಸಿನ ಯುವತಿಯೋರ್ವಳು ತನ್ನ ತಾಯಿಗೆ ವರನನ್ನು ಹುಡುಕುತ್ತಿರುವ ಪೋಸ್ಟ್ ಮಾಡಿದ್ದು ಈ ಟ್ವೀಟ್ ಇದೀಗ ವೈರಲ್ ಆಗಿದೆ.
ಆಸ್ತಾ ವರ್ಮಾ
ಆಸ್ತಾ ವರ್ಮಾ

ನವದೆಹಲಿ: ಮದುವೆ ವಯಸ್ಸಿನ ಯುವತಿಯೋರ್ವಳು ತನ್ನ ತಾಯಿಗೆ ವರನನ್ನು ಹುಡುಕುತ್ತಿರುವ ಪೋಸ್ಟ್ ಮಾಡಿದ್ದು ಈ ಟ್ವೀಟ್ ಇದೀಗ ವೈರಲ್ ಆಗಿದೆ.

ಕಾನೂನು ವಿದ್ಯಾರ್ಥಿನಿಯಾಗಿರುವ ಆಸ್ತಾ ವರ್ಮಾ ಎಂಬಾಕೆ ತನ್ನ ತಾಯಿ ಜೊತೆ ಕುಳಿತ್ತಿರುವ ಫೋಟೋವನ್ನು ಟ್ವೀಟರ್ ಖಾತೆಯಲ್ಲಿ ಪೋಸ್ಟ್ ಮಾಡಿ ವರನ ಅನ್ವೇಷನೆ ನಡೆಸಿದ್ದಾರೆ. 

ಆಸ್ತಾ ವರ್ಮಾ ತನ್ನ ಪೋಸ್ಟ್ ನಲ್ಲಿ ನನ್ನ ತಾಯಿಗೆ 50 ವರ್ಷದ ಸೂಕ್ತ ವರ ಬೇಕಾಗಿದ್ದಾರೆ. ಇಷ್ಟೇ ಅಲ್ಲದೆ ವರ ಸಸ್ಯಹಾರಿಯಾಗಿರಬೇಕು. ಮದ್ಯ ಸೇವಿಸಬಾರದು ಎಂದು ಬರೆದುಕೊಂಡಿದ್ದಾರೆ. 

ಕಳೆದ ಗುರುವಾರ ಈ ಟ್ವೀಟ್ ಮಾಡಲಾಗಿದ್ದು ಇದೀಗ ಭಾರೀ ವೈರಲ್ ಆಗಿದೆ. 5500 ರೀಟ್ವೀಟ್ ಮಾಡಲಾಗಿದ್ದು 27 ಸಾವಿರಕ್ಕೂ ಹೆಚ್ಚು ಲೈಕ್ ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com