ಪ್ರಿಯಾಂಕಾ ಗಾಂಧಿ ಮೊಬೈಲ್ ಹ್ಯಾಕ್? ಕೈ ನಾಯಕಿಗೆ ವಾಟ್ಸಾಪ್ ಸಂದೇಶ ಬಂದಿದೆ ಎಂದ ಕಾಂಗ್ರೆಸ್

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡೆ  ಪ್ರಿಯಾಂಕಾ ಗಾಂಧಿ ಅವರ ಫೋನ್ ಹ್ಯಾಕ್ ಆಗಿರಬಹುದೆಂದು ಶಂಕೆ ವ್ಯಕ್ತವಾಗಿದ್ದು ಈ ಸಂಬಂಧ  ವಾಟ್ಸಾಪ್ ನಿಂದ ಸಂದೇಶ ಬಂದಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.
ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ

ನವದೆಹಲಿ: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡೆ  ಪ್ರಿಯಾಂಕಾ ಗಾಂಧಿ ಅವರ ಫೋನ್ ಹ್ಯಾಕ್ ಆಗಿರಬಹುದೆಂದು ಶಂಕೆ ವ್ಯಕ್ತವಾಗಿದ್ದು ಈ ಸಂಬಂಧ  ವಾಟ್ಸಾಪ್ ನಿಂದ ಸಂದೇಶ ಬಂದಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.

ಆದರೆ ಪ್ರಿಯಾಂಕಾ ಯಾವಾಗ ಈ ಸಂದೇಶ ಸ್ವೀಕರಿಸಿದ್ದಾರೆ ಎನ್ನುವ ಬಗೆಗೆ ಪಕ್ಷ ಎಲ್ಲಿಯೂ ನಿಖರವಾಗಿ ಹೇಳಿಲ್ಲ.

"ಪ್ರಿಯಾಂಕಾ ಗಾಂಧಿಯವರಿಗೂ ಇದೇ ನಮೂನೆಯ ಸಂದೇಶ ಬಂದಿದೆ. ವಾಟ್ಸಾಪ್ ನಿಂದ ಫೋನ್ ಹ್ಯಾಕ್ ಆಗಿರುವ ಬಗೆಗೆ ಸಂದೇಶ ಬಂದಿದೆ ಎಂದು ನಾನು ಹೇಳಲು ಬಯಸುತ್ತೇನೆ"ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ. ಅವರು  ಪ್ರಫುಲ್ ಪಟೇಲ್ ಮತ್ತು ಮಮತಾ ಬ್ಯಾನರ್ಜಿ ಫೇಸ್‌ಬುಕ್ ಒಡೆತನದ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ನಿಂದ ಸಂದೇಶ ಸ್ವೀಕರಿಸಿದ ಬಗೆಗೆ ವಿವರಿಸುತ್ತಾ ಈ ಮಾತನ್ನು ಆಡಿದ್ದಾರೆ.

ಫೋನ್‌ಗಳನ್ನು ಹ್ಯಾಕ್ ಮಾಡಲಾಗಿದೆ  ಎಂಬ ಸಂದೇಶವನ್ನು ವಾಟ್ಸಾಪ್ ಹಲವರಿಗೆ ಕಳಿಸುತ್ತಿರುವ ಅದೇ ಸಮಯದಲ್ಲಿ ಪ್ರಿಯಾಂಕಾ ಗಾಂಧಿ ಸಹ ಸಂದೇಶ ಸ್ವೀಕರಿಸಿದ್ದರು ಎಂದು ಸುರ್ಜೆವಾಲಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com