ಆರ್‌ಸಿಇಪಿ ಕುರಿತ ಸೋನಿಯಾ ಧಿಡೀರ್ ಎಚ್ಚರಗೊಂಡಿದ್ದೇಕೆ? ಕೇಂದ್ರ ಸಚಿವ ಪಿಯೂಷ್‍ ಗೋಯಲ್ ಪ್ರಶ್ನೆ

ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ(ಆರ್‌ಸಿಇಪಿ) ಒಪ್ಪಂದವನ್ನು  ಅನುಮೋದಿಸುವ ಯಾವುದೇ ಕ್ರಮವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರೋಧಿಸುತ್ತಿರುವುದರ ನಡುವೆಯೇ...
ಪಿಯೂಶ್ ಗೋಯಲ್
ಪಿಯೂಶ್ ಗೋಯಲ್

ನವದೆಹಲಿ: ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ(ಆರ್‌ಸಿಇಪಿ) ಒಪ್ಪಂದವನ್ನು  ಅನುಮೋದಿಸುವ ಯಾವುದೇ ಕ್ರಮವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರೋಧಿಸುತ್ತಿರುವುದರ ನಡುವೆಯೇ ಇದ್ದಕ್ಕಿದ್ದಂತೆ ಅವರು ಎಚ್ಚರಗೊಂಡಿರುವುದೇಕೆ? ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಶನಿವಾರ ತಡರಾತ್ರಿ ವಾಗ್ದಾಳಿ ನಡೆಸಿದ್ದಾರೆ.

‘2007 ರಲ್ಲಿ ಭಾರತ-ಚೀನಾ ಎಫ್‌ಟಿಎ(ಮುಕ್ತ ವಾಣಿಜ್ಯ ಒಪ್ಪಂದ) ಬಗ್ಗೆ  ಯುಪಿಎ ಸರ್ಕಾರ ಒಪ್ಪಿಕೊಂಡಾಗ ಸೋನಿಯಾ ಗಾಂಧಿ ಎಲ್ಲಿದ್ದರು? ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ತಮಗೆ ಆದ ಈ ಅವಮಾನದ ವಿರುದ್ಧ ಮಾತನಾಡುತ್ತಾರೆ ಎಂದು ನಾನು ಭಾವಿಸುತ್ತೇನೆ,’ ಎಂದು ಗೋಯಲ್ ಸರಣಿ ಟ್ವೀಟ್‌ಗಳಲ್ಲಿ ಬರೆದಿದ್ದಾರೆ.

ಆರ್‌ಸಿಇಪಿ ಒಪ್ಪಂದದಿಂದ ದೇಶಕ್ಕೆ ಮಾರಕ ಎಂದು ಸೋನಿಯಾ ಗಾಂಧಿ ಹೇಳಿಕೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com