ಅಮ್ಮನಿಗೆ 50 ವರ್ಷದ ವರ ಬೇಕಾಗಿದ್ದಾರೆ: ಮಗಳ ಟ್ವೀಟ್, ಕಾಳಜಿಗೆ ಟ್ವೀಟಿಗರ ಮೆಚ್ಚುಗೆ! 

ತನ್ನ ತಾಯಿಗೆ ಮರುಮದುವೆ ಮಾಡಿಸಿದ್ದ ಪುತ್ರ ಆಕೆಗೆ ಭಾವುಕವಾಗಿ ಬರೆದ ಪತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಈಗ ಅಂಥಹದ್ದೇ ಮತ್ತೊಂದು ಭಾವುಕ ಘಟನೆ ನಡೆದಿದೆ.

Published: 04th November 2019 06:09 PM  |   Last Updated: 04th November 2019 06:09 PM   |  A+A-


Looking for a 'Handsome 50-Year-Old Man' for mother Woman's Tweet goes Viral

ಅಮ್ಮನಿಗೆ 50 ವರ್ಷದ ವರ ಬೇಕಾಗಿದ್ದಾರೆ: ಮಗಳ ಟ್ವೀಟ್, ಕಾಳಜಿಗೆ ಟ್ವೀಟಿಗರ ಮೆಚ್ಚುಗೆ!

Posted By : Srinivas Rao BV
Source : PTI

ನವದೆಹಲಿ: ತನ್ನ ತಾಯಿಗೆ ಮರುಮದುವೆ ಮಾಡಿಸಿದ ಪುತ್ರ ಆಕೆಗೆ ಭಾವುಕವಾಗಿ ಬರೆದ ಪತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಈಗ ಅಂಥಹದ್ದೇ ಮತ್ತೊಂದು ಭಾವುಕ ಘಟನೆ ನಡೆದಿದೆ.

ಯುವತಿಯೊಬ್ಬಳು ಈಗ ತನ್ನ ತಾಯಿಗೆ ಸೂಕ್ತ ವರ ಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಈ ಪೋಸ್ಟ್ ವೈರಲ್ ಆಗತೊಡಗಿದೆ.  ವಿದ್ಯಾರ್ಥಿನಿ ಆಸ್ತಾ ಕಳೆದ ವಾರ ಟ್ವೀಟ್ ಮಾಡಿದ್ದು ಅದರಲ್ಲಿ ತನ್ನ ತಾಯೊಗೆ 50 ವರ್ಷದ ಹ್ಯಾಂಡ್ಸಮ್ ವರ ಬೇಕಾಗಿದ್ದಾರೆ ಎಂದು ಹೇಳಿದ್ದಾರೆ. 

ತಾಯಿಯೊಂದಿಗೆ ತಾನು ಕ್ಲಿಕ್ಕಿಸಿರುವ ಫೋಟೊವನ್ನು ಈ ಟ್ವೀಟ್ ಮಾಡಿದ್ದಾರೆ.  ವರ ಸಸ್ಯಾಹಾರಿಯಾಗಿರಬೇಕು, ಮದ್ಯ ಸೇವನೆ ಹವ್ಯಾಸ ಇರಬಾರದು ಉತ್ತಮ ವ್ಯಕ್ತಿಯಾಗಿರಬೇಕು ಎಂದು ಆಸ್ತಾ ಹೇಳಿದ್ದು ಗ್ರೂಮ್ ಹಂಟಿಂಗ್ ಎಂಬ ಹ್ಯಾಶ್ ಟ್ಯಾಗ್ ನೀಡಿದ್ದಾರೆ. 

ಆಸ್ತಾಗೆ ಕೆಲವು ಸಲಹೆಗಳು ಕೂಡ ಬಂದಿದ್ದು. ಮಗಳಿಗೆ ತಾಯಿ ಗಂಡು ಹುಡುಕಬೇಕಿತ್ತು. ಆದರೆ ಈಗ ಮಗಳೇ ತಾಯಿಗೆ ವರ ಹುಡುಕುತ್ತಿದ್ದಾರೆ. ಇದು  ಮನ ಕರಗಿಸುವ ವಿಷಯ ಎಂದು ಹೇಳಿದ್ದಾರೆ. ಈ ಟ್ವೀಟ್ ಗೆ 5 ಸಾವಿರ ಮಂದಿ ಪ್ರತಿಕ್ರಿಯಿಸಿದರೆ, 5,500ಕ್ಕೂ ಹೆಚ್ಚು ಮಂದಿ ರೀಟ್ವೀಟ್ ಮಾಡಿದ್ದಾರೆ. 27 ಕ್ಕೂ ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಟ್ವಿಟರ್ ನಲ್ಲಿ ಒಳ್ಳೆಯ ಕೆಲಸಕ್ಕೆ ಶುಭಹಾರೈಕೆಯ ಮಹಾಪೂರ ಹರಿದುಬಂದಿದೆ.

Stay up to date on all the latest ರಾಷ್ಟ್ರೀಯ news
Poll
Defence minister Rajanath Singh

101 ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳಲು ನಿರ್ಬಂಧ ಹೇರುವ ಭಾರತದ ಕ್ರಮವು, ದೇಶೀಯ ಶಸ್ತ್ರಾಸ್ತ್ರ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆಯೆ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp