ನಕಲಿ ಶೂ ವಿತರಣೆ ಬಗ್ಗೆ ತನಿಖೆ, ಶಾಲೆಗಳ ದುರಸ್ತಿ ಎಸ್​ಡಿಎಂಸಿಗಳ ಹೆಗಲಿಗೆ:ಶಿಕ್ಷಣ ಹಾಗೂ ಸಕಾಲ ಸಚಿವ ಸುರೇಶ್​​ ಕುಮಾರ್

ಶಾಲಾ ಮಕ್ಕಳಿಗೆ ಶೂ ನೀಡುವ ಯೋಜನೆಯಲ್ಲಿ ಗೋಲ್​​ಮಾಲ್ ಆಗಿರುವ ಕುರಿತು ತನಿಖೆ ನಡೆಸಲಾಗುವುದು ಎಂದು ಸಚಿವ ಸುರೇಶ್​ ಕುಮಾರ್ ತಿಳಿಸಿದರು.

Published: 04th November 2019 10:38 PM  |   Last Updated: 04th November 2019 10:38 PM   |  A+A-


Minister Suresh Kumar orders probe into distribution of low quality shoes at government schools

ನಕಲಿ ಶೂ ವಿತರಣೆ ಬಗ್ಗೆ ತನಿಖೆ, ಶಾಲೆಗಳ ದುರಸ್ತಿ ಎಸ್​ಡಿಎಂಸಿಗಳ ಹೆಗಲಿಗೆ:ಶಿಕ್ಷಣ ಸಚಿವ ಸುರೇಶ್​​ ಕುಮಾರ್

Posted By : Srinivas Rao BV
Source : RC Network

ಚಾಮರಾಜನಗರ: ಶಾಲಾ ಮಕ್ಕಳಿಗೆ ಶೂ ನೀಡುವ ಯೋಜನೆಯಲ್ಲಿ ಗೋಲ್​​ಮಾಲ್ ಆಗಿರುವ ಕುರಿತು ತನಿಖೆ ನಡೆಸಿ ಮೂಲ ಪುರುಷನನ್ನು ಪತ್ತೆ ಹಚ್ಚಲಾಗುವುದು ಎಂದು ಸಚಿವ ಸುರೇಶ್​ ಕುಮಾರ್ ಹೇಳಿದರು.

ನಕಲಿ ಶೂ ವಿತರಣೆ ತನಿಖೆ, ಶಾಲೆಗಳ ದುರಸ್ತಿ ಎಸ್​​ಡಿಎಂಸಿ ಹೆಗಲಿಗೆ: ಶಿಕ್ಷಣ ಸಚಿವ ಸುರೇಶ್ ಕುಮಾರ್ಜಿಲ್ಲೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಮಕ್ಕಳಿಗೆ ನೀಡುವ ಶೂಗಳು 1 ತಿಂಗಳು ಬಾಳಿಕೆ ಬರುತ್ತವೆ ಎಂದು ಡೀಲರ್​ಗಳೇ ಹೇಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಾಗುವುದು. ಶೂ ವಿತರಣೆಯನ್ನು ಸರ್ಕಾರಿ ಸ್ವಾಮ್ಯದ ಲಿಡ್​ಕರ್ ಸಂಸ್ಥೆಗೆ ವಹಿಸುವ ಚಿಂತನೆಯಿದೆ ಎಂದು ಹೇಳಿದರು. ಜೊತೆಗೆ, ಶಿಥಿಲಗೊಂಡ ಶಾಲೆಗಳ ದುರಸ್ತಿ ಕಾರ್ಯದ ಜವಾಬ್ದಾರಿಯನ್ನು ಎಸ್​ಡಿಎಂಸಿಗೆ ನೀಡುತ್ತಿದ್ದು, ಅವರ ಮೇಲಿಟ್ಟಿರುವ ನಂಬಿಕೆಯನ್ನು ಹುಸಿಗೊಳಿಸಬಾರದು ಎಂದು ಮನವಿ ಮಾಡಿದರು.ಪಿಯುಸಿ ಫಲಿತಾಂಶಕ್ಕೂ ಮುನ್ನ ನೀಟ್ ಫಲಿತಾಂಶ ಬಂದಾಗ ವಿದ್ಯಾರ್ಥಿಗಳಿಗೆ ಒತ್ತಡ ಕಡಿಮೆಯಾಗಲಿದೆ ಎಂಬ ಸಲಹೆ ಕೇಳಿ ಬಂದಿದ್ದು, ಗುರುವಾರ ಪಿಯು ನಿರ್ದೇಶಕರು ಮತ್ತು ಹಿಂದಿನ ನಿರ್ದೇಶಕರ ಸಭೆ ಕರೆಯಲಾಗಿದೆ.

ಅಂದು ಇದು ನಿರ್ಧಾರವಾಗಲಿದೆ ಎಂದು ತಿಳಿಸಿದರು.ಟಿಪ್ಪು ವಿಚಾರವನ್ನು ಪಠ್ಯದಿಂದ ತೆಗೆದು ಹಾಕಲು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಪಠ್ಯದಿಂದ ತೆಗೆದುಹಾಕಬೇಕೆಂದು ಪತ್ರ ಬರೆದಿರುವ ಅಪ್ಪಚ್ಚು ರಂಜನ್ ಅವರಿಂದ ಯಾವ ಕಾರಣಗಳಿಗೆ ಟಿಪ್ಪು ಪಠ್ಯ ಬೇಡ ಎಂದು ವಿವರ ಪಡೆಯಲಾಗುವುದು ಎಂದು ಮಾಹಿತಿ ನೀಡಿದರು.

ವರದಿ: ಗೂಳಿಪುರ ನಂದೀಶ್

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp