ಕರ್ತಾರ್ಪುರ ಗಡಿಯಲ್ಲಿ ಉಗ್ರರ ತರಬೇತಿ ಶಿಬಿರ: ಬಿಎಸ್ಎಫ್ ಮೂಲಗಳು

ಕರ್ತಾರ್ಪುರ ಸಾಹಿಬ್ ಗುರದ್ವಾರದ ಗಡಿ ಜಿಲ್ಲೆ ಬಳಿ ಉಗ್ರರ ತರಬೇತಿ ಶಿಬಿರಗಳಿರುವುದಾಗಿ ಬಿಎಸ್ಎಫ್ ಮೂಲಗಳಿಂದ ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನರೋವಾಲ್: ಕರ್ತಾರ್ಪುರ ಸಾಹಿಬ್ ಗುರದ್ವಾರದ ಗಡಿ ಜಿಲ್ಲೆ ಬಳಿ ಉಗ್ರರ ತರಬೇತಿ ಶಿಬಿರಗಳಿರುವುದಾಗಿ ಬಿಎಸ್ಎಫ್ ಮೂಲಗಳಿಂದ ತಿಳಿದುಬಂದಿದೆ. 

ಪಾಕಿಸ್ತಾನ-ಪಂಜಾಬ್ ಗಡಿಯಲ್ಲಿರುವ ಮುರಿಡ್ಕೆ, ಶಾಕರ್ಗರ್ಹ್ ಮತ್ತು ನರೋವಾಲ್ ಬಳಿ ಉಗ್ರರ ತರಬೇತಿ ಕೇಂದ್ರಗಳಿದ್ದು,  ಶಿಬಿರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪುರುಷರು ಹಾಗೂ ಮಹಿಳೆಯರು ಇರುವುದಾಗಿ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. 

ನಾರೋವಾಲ್ ಜಿಲ್ಲೆ ಭಾರತದ ಪಂಜಾಬ್ ಹಾಗೂ ಪಾಕಿಸ್ತಾನ ಗಡಿಯಲ್ಲಿದೆ. ಈ ಪ್ರದೇಶದಲ್ಲಿ ಉಗ್ರರ ಶಿಬಿರಗಳಿರುವುದಾಗಿ ತಿಳಿದುಬಂದಿದೆ. 

ಕೆಲ ದಿನಗಳ ಹಿಂದಷ್ಟೇ ಭಾರತ-ಪಾಕಿಸ್ತಾನ ಕರ್ತಾರ್ಪುರ ಕಾರಿಡಾರ್ ಯೋಜನೆಗೆ ಚಾಲನೆ ನೀಡಿತ್ತು. ನವೆಂಬರ್ 9 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಯೋಜನೆಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಇದೇ ದಿನ ಪಾಕಿಸ್ತಾನ ಪ್ರಧಾನಿ ಕೂಡ ಯೋಜನೆಗೆ ಚಾಲನೆ ನೀಡಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com