ಅಯೋಧ್ಯೆಗೆ 4 ಸಾವಿರಕ್ಕೂ ಹೆಚ್ಚು ಅರೆಸೇನಾ ಪಡೆ ಸಿಬ್ಬಂದಿ ರವಾನೆ 

ರಾಮಜನ್ಮ ಭೂಮಿ ಹಾಗೂ ಬಾಬ್ರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಉತ್ತರ ಪ್ರದೇಶಕ್ಕೆ 4 ಸಾವಿರಕ್ಕೂ ಹೆಚ್ಚು ಅರೆಸೇನಾ ಪಡೆ ತುಕಡಿಗಳನ್ನು ಗಳನ್ನು ಕಳುಹಿಸುತ್ತಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಅಯೋಧ್ಯೆ: ರಾಮಜನ್ಮ ಭೂಮಿ ಹಾಗೂ ಬಾಬ್ರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಉತ್ತರ ಪ್ರದೇಶಕ್ಕೆ 4 ಸಾವಿರಕ್ಕೂ ಹೆಚ್ಚು ಅರೆಸೇನಾ ಪಡೆ ತುಕಡಿಗಳನ್ನು ಗಳನ್ನು ಕಳುಹಿಸುತ್ತಿದೆ. 

ನವೆಂಬರ್ 18ರವರೆಗೂ ಉತ್ತರ ಪ್ರದೇಶದಲ್ಲಿರುವಂತೆ 15 ಅರಸೇನಾ ಪಡೆಗಳ ತುಕಡಿಯನ್ನು ಉತ್ತರ ಪ್ರದೇಶಕ್ಕೆ ಕಳುಹಿಸುವ ನಿರ್ಧಾರವನ್ನು ನಿನ್ನೆ ನಡೆದ ಗೃಹ ವ್ಯವಹಾರಗಳ ಸಚಿವಾಲಯದಲ್ಲಿ ಕೈಗೊಳ್ಳಲಾಯಿತು.

ಮೂರು ಬಿಎಸ್ ಎಫ್, ಆರ್ ಎಎಫ್, ಸಿಐಎಸ್ ಎಫ್, ಐಟಿಬಿಪಿ ಮತ್ತು ಎಸ್ ಎಸ್ ಬಿ ತುಕಡಿಗಳು ಸೇರಿದಂತೆ 15 ಅರಸೇನಾ ಪಡೆ ತುಕಡಿಗಳನ್ನು ನವೆಂಬರ್ 11 ರಂದು ನವೆಂಬರ್ 18ರವರೆಗೂ ಉತ್ತರ ಪ್ರದೇಶದಲ್ಲಿ ನಿಯೋಜಿಸಲಾಗುತ್ತಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ, 

16 ಆರ್ ಎಎಫ್ , ಸಿಐಎಸ್ ಎಫ್ ಸೇರಿದಂತೆ ಒಟ್ಟಾರೇ 40 ತುಕಡಿಗಳನ್ನು ನವೆಂಬರ್ 18ರವರೆಗೂ ಉತ್ತರ ಪ್ರದೇಶದಲ್ಲಿ ಭದ್ರತೆಗಾಗಿ ನಿಯೋಜಿಸಲಾಗುತ್ತಿದೆ ಎಂಬ ಅಧಿಕೃತ ಮಾಹಿತಿ ತಿಳಿದುಬಂದಿದೆ. 

ಉತ್ತರ ಪ್ರದೇಶದ 12 ಸೂಕ್ಷ್ಮ ಜಿಲ್ಲೆಗಳು ಹಾಗೂ ನಗರಗಳಲ್ಲಿ ಈ ಅರಸೇನಾ ಪಡೆಯನ್ನು ನಿಯೋಜಿಸಲಾಗುತ್ತಿದೆ. ವಾರಣಾಸಿ, ಅಯೋಧ್ಯೆ ಹೊರತಾಗಿಯೂ ಕಾನ್ಪುರ, ಅಲಿಘಡ, ಲಖನೌ, ಅಜಂಗಡ ಮತ್ತಿತರ ಕಡೆಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com