ಅಯೋಧ್ಯೆ ಪ್ರವೇಶಿಸಿರುವ 7 ಪಾಕ್ ಉಗ್ರರು: ದಾಳಿಗೆ ಭಾರೀ ಸಂಚು- ಗುಪ್ತಚರ ಇಲಾಖೆ ಮಾಹಿತಿ

ಬಹುನಿರೀಕ್ಷಿತ ರಾಮ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಇನ್ನು ಕೆಲವೇ ದಿನಗಳಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಲಿದ್ದು, ಈ ನಡುವಲ್ಲೆ ಅಯೋಧ್ಯೆ ಪ್ರವೇಶಿಸಿರುವ ಪಾಕಿಸ್ತಾನದ 7 ಉಗ್ರರು ವಿಧ್ವಂಸಕ ಕೃತ್ಯವೆಸಗಲು ಭಾರೀ ಸಂಚು ರೂಪಿಸಿದ್ದಾರೆಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಬಹುನಿರೀಕ್ಷಿತ ರಾಮ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಇನ್ನು ಕೆಲವೇ ದಿನಗಳಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಲಿದ್ದು, ಈ ನಡುವಲ್ಲೆ ಅಯೋಧ್ಯೆ ಪ್ರವೇಶಿಸಿರುವ ಪಾಕಿಸ್ತಾನದ 7 ಉಗ್ರರು ವಿಧ್ವಂಸಕ ಕೃತ್ಯವೆಸಗಲು ಭಾರೀ ಸಂಚು ರೂಪಿಸಿದ್ದಾರೆಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. 

ನೇಪಾಳದ ಮೂಲಕ ಪಾಕಿಸ್ತಾನದ 7 ಉಗ್ರರಿರುವ ಗುಂಪು ಭಾರತ ಪ್ರವೇಶಿಸಿದ್ದು, 7 ಉಗ್ರರ ಪೈಕಿ ಐವರು ಉಗ್ರರನ್ನು ಗುಪ್ತಚರ ಇಲಾಖೆ ಪತ್ತೆ ಹಚ್ಚಿದೆ. ಐವರು ಉಗ್ರರನ್ನು ಮೊಹಮ್ಮದ್ ಯಾಕುಬ್, ಅಬು ಹಂಝ, ಮೊಹಮ್ಮದ್ ಶಹ್ಬಾಜ್, ನಿಸಾರ್ ಅಹ್ಮದ್, ಮೊಹಮ್ಮದ್ ಕ್ವಾಮಿ ಚೌದರಿ ಎಂದು ಹೇಳಲಾಗುತ್ತಿದೆ. ಇನ್ನುಳಿದ ಇಬ್ಬರು ಉಗ್ರರ ಗುರ್ತಿಕೆಗೆ ಯತ್ನಗಳು ಮುಂದುವರೆದಿವೆ ಎಂದು ತಿಳಿದುಬಂದಿದೆ. 

ಪ್ರಸ್ತುತ ಭಾರತ ಪ್ರವೇಶಿಸಿರುವ ಈ 7 ಮಂದಿ ಉಗ್ರರು ಅಯೋಧ್ಯೆ ಹಾಗೂ ಗೋರಖ್ಪುರದಲ್ಲಿ ಅಡಗಿ ಕುಳಿತಿದ್ದು, ವಿಧ್ವಂಸಕ ಕೃತ್ಯಕ್ಕೆ ಭಾರೀ ಸಂಚು ರೂಪಿಸುತ್ತಿದ್ದಾರೆಂದು ತಿಳಿದುಬಂದಿದೆ. 

ಸುಪ್ರೀಂಕೋರ್ಟ್ ಆದೇಶ ಹಿನ್ನಲೆಯಲ್ಲಿ ಈಗಾಗಲೇ ಅಯೋಧ್ಯೆ ಹಾಗೂ ಉತ್ತರಪ್ರದೇಶದಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಪೊಲೀಸರು ಹೈಅಲರ್ಟ್ ಆಗಿದ್ದಾರೆ. ಅಗತ್ಯ ಬಿದ್ದರೆ, ರಾಷ್ಟ್ರೀಯ ಭದ್ರತಾ ಪಡೆಗಳನ್ನು ನಿಯೋಜಿಸಲಾಗುತ್ತದೆ ಎಂದು ಉತ್ತರಪ್ರದೇಶದ ಡಿಜಿಪಿ ಒಪಿ ಸಿಂಗ್ ಅವರು ಹೇಳಿದ್ದಾರೆ. 

ಯಾವುದೇ ಪರಿಸ್ಥಿತಿ ಎದುರಿಸಲು ನಾವು ಸಂಪೂರ್ಣವಾಗಿ ಸಿದ್ಧರಿದ್ದೇವೆ. ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com