ಸೆಲ್ಫೀ ತೆಗೆದುಕೊಳ್ಳುವ ವೇಳೆ ಬಾವಿಗೆ ಬಿದ್ದು ಮಹಿಳೆ ಸಾವು

ಕೆಲವೇ ದಿನಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಬೇಕಿದ್ದ ಮಹಿಳೆಯೊಬ್ಬರು ಸೆಲ್ಫೀ ತೆಗೆದುಕೊಳ್ಳುವ ವೇಳೆ ಬಾವಿಗೆ ಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚೆನ್ನೈನ ಪಟ್ಟಾಭಿರಾಮದಲ್ಲಿ ಸೋಮವಾರ ನಡೆದಿದೆ.

Published: 05th November 2019 01:28 PM  |   Last Updated: 05th November 2019 01:28 PM   |  A+A-


Mercy Steffy was to marry her fiance this January (Photo- Special Arrangement)

ಮೃತ ಮಹಿಳೆ

Posted By : Manjula VN
Source : The New Indian Express

ಚೆನ್ನೈ: ಕೆಲವೇ ದಿನಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಬೇಕಿದ್ದ ಮಹಿಳೆಯೊಬ್ಬರು ಸೆಲ್ಫೀ ತೆಗೆದುಕೊಳ್ಳುವ ವೇಳೆ ಬಾವಿಗೆ ಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚೆನ್ನೈನ ಪಟ್ಟಾಭಿರಾಮದಲ್ಲಿ ಸೋಮವಾರ ನಡೆದಿದೆ. 

ಪಟ್ಟಾಭಿರಾಮದ ಗಾಂಧಿನಗರದ ಟಿ ಮೆರ್ಸಿ ಸ್ಟೆಫ್ಫಿ (4) ಸಾವನ್ನಪ್ಪಿರುವ ಮಹಿಳೆಯಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ನವಜೀವನ್ ನಗರ ನಿವಾಸಿಯಾಗಿರುವ ಡಿ. ಅಪ್ಪು (24) ಎಂಬ ಯುವಕನೊಂದಿಗೆ ಸ್ಟೆಫ್ಫಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಜನವರಿ ತಿಂಗಳಿನಲ್ಲಿ ಇಬ್ಬರ ವಿವಾಹ ನಿಶ್ಚಯವಾಗಿತ್ತು. 

ಸಾವನ್ನಪ್ಪುವ ದಿನವೇ ಸ್ಟೆಫ್ಫಿ, ಅಪ್ಪು ಜೊತೆಗೆ ತೆರಳಿ ದ್ವಿಚಕ್ರ ವಾಹನದಲ್ಲಿ ಸುತ್ತಾಡಿಕೊಂಡು ಮನೆಗೆ ವಾಪಸ್ಸಾಗಿದ್ದಳು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಇಬ್ಬರೂ ವಂಡಲೂರು-ಮಿಂಜುರ್ ಕೃಷಿ ಭೂಮಿಗೆ ತೆರಳಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಬಾವಿ ಬಳಿ ನಿಂತು ಫೋಟೋ ತೆಗೆಯುವಂತೆ ಪ್ರಿಯಕರನಿಗೆ ತಿಳಿಸಿದ್ದಾರೆ.

ಕೃಷಿ ಭೂಮಿಯಲ್ಲಿದ್ದ ಬಾವಿ ಅತ್ಯಂತ ಹಳೆಯದ್ದಾಗಿದ್ದು, ಬಾವಿಯೊಳಗೆ ಮೆಟ್ಟಿಲುಗಳಿವೆ. ಬಾವಿಯೊಳಗಿದ್ದ ಮೆಟ್ಟಿನ ಮೇಲೆ ನಿಂತಿದ್ದ ಸ್ಟೆಫ್ಫಿ ಫೋಟೋಗಳನ್ನು ತೆಗೆಯಲು ತಿಳಿಸಿದ್ದಾರೆ. ಈ ವೇಳೆ ಕಾಲು ಜಾರಿ ಬಾವಿಗೆ ಬಿದ್ದಿದ್ದಾರೆ. ಬಾವಿಗೆ ಬಿದ್ದಿದ್ದ ಸ್ಟೆಫ್ಫಿಯನ್ನು ರಕ್ಷಣೆ ಮಾಡುವ ಸಲುವಾಗಿ ಅಪ್ಪು ಕೂಡ ಬಾವಿಗೆ ಬಿದ್ದಿದ್ದಾರೆ. ಆದರೆ, ಸ್ಟೆಫ್ಫಿ ಸಿಕ್ಕಿಲ್ಲ. ಬಾವಿಗೆ ಬಿದ್ದಿದ್ದ ಅಪ್ಪು ಸಹಾಯಕ್ಕೆ ಕೂಗಿದ್ದಾರೆ. ಈ ವೇಳೆ ಸ್ಥಳಕ್ಕೆ ಧಾವಿಸಿರುವ ರೈತರು ಅಪ್ಪುನನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಟೆಫ್ಫಿ ಮೃತದೇಹವನ್ನು ಹೊರ ತೆಗೆದಿದ್ದಾರೆ. 

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp