'ಮಹಾ’ ಚಂಡಮಾರುತ: ಪರಿಹಾರ ಕಾರ್ಯಾಚರಣೆಗೆ ನೌಕಾಸೇನೆ ಸಿದ್ಧ

ಪೂರ್ವ ಮಧ್ಯ ಅರೇಬಿಯನ್ ಸಮುದ್ರದ ಮೇಲೆ ’ಮಹಾ’ ಚಂಡಮಾರುತ ತೀವ್ರಗೊಳ್ಳಲಿರುವ ಹಿನ್ನೆಲೆಯಲ್ಲಿ ಗುಜರಾತ್ ಮತ್ತು ಉತ್ತರ ಮಹಾರಾಷ್ಟ್ರ ತೀರದಲ್ಲಿ ಅಗತ್ಯ ಮಾನವೀಯ ಮತ್ತು ವಿಪತ್ತು ಪರಿಹಾರ (ಎಚ್‌ಎಡಿಆರ್) ಕಾರ್ಯಾಚರಣೆಯನ್ನು ಕೈಗೊಳ್ಳಲು ಭಾರತೀಯ ನೌಕಾಪಡೆಯ ಪಶ್ಚಿಮ ನೌಕಾಪಡೆ ಸಿದ್ಧವಾಗಿದೆ.

Published: 05th November 2019 02:11 PM  |   Last Updated: 05th November 2019 02:11 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : Sumana Upadhyaya
Source : UNI

ನವದೆಹಲಿ: ಪೂರ್ವ ಮಧ್ಯ ಅರೇಬಿಯನ್ ಸಮುದ್ರದ ಮೇಲೆ ’ಮಹಾ’ ಚಂಡಮಾರುತ ತೀವ್ರಗೊಳ್ಳಲಿರುವ ಹಿನ್ನೆಲೆಯಲ್ಲಿ ಗುಜರಾತ್ ಮತ್ತು ಉತ್ತರ ಮಹಾರಾಷ್ಟ್ರ ತೀರದಲ್ಲಿ ಅಗತ್ಯ ಮಾನವೀಯ ಮತ್ತು ವಿಪತ್ತು ಪರಿಹಾರ (ಎಚ್‌ಎಡಿಆರ್) ಕಾರ್ಯಾಚರಣೆಯನ್ನು ಕೈಗೊಳ್ಳಲು ಭಾರತೀಯ ನೌಕಾಪಡೆಯ ಪಶ್ಚಿಮ ನೌಕಾಪಡೆ ಸಿದ್ಧವಾಗಿದೆ.


ವೆಸ್ಟರ್ನ್ ನೇವಲ್ ಕಮಾಂಡ್‌ನ ನಾಲ್ಕು ಯುದ್ಧನೌಕೆಗಳಲ್ಲಿ ಆಹಾರ ಪ್ಯಾಕೆಟ್‌ಗಳು, ನೀರು, ವೈದ್ಯಕೀಯ ಸರಬರಾಜು ಮತ್ತು ಇತರ ಅಗತ್ಯ ಸರಕುಗಳಂತಹ ಎಚ್‌ಎಡಿಆರ್ ಪರಿಹಾರ ಸಾಮಗ್ರಿಗಳನ್ನು ತುಂಬಿಸಲಾಗಿದೆ. ಗುಜರಾತ್ ನೌಕಾ ಪ್ರದೇಶದ ನೌಕಾ ಘಟಕಗಳನ್ನು ನೀರೊಳಗಿನ ಡೈವಿಂಗ್ ಉಪಕರಣಗಳು ಮತ್ತು ಗಾಳಿ ತುಂಬಬಹುದಾದ ದೋಣಿಗಳನ್ನು ಹೊಂದಿರುವ ತುರ್ತು ಪ್ರತಿಕ್ರಿಯೆ ತಂಡಗಳೊಂದಿಗೆ ಸಿದ್ಧಪಡಿಸಲಾಗಿದೆ ಎಂದು ರಕ್ಷಣಾ ಸಚಿವಾಲಯದ ಅಧಿಕೃತ ಹೇಳಿಕೆ ಮಂಗಳವಾರ ತಿಳಿಸಿದೆ.


ಇದಲ್ಲದೆ, ಯಾವುದೇ ಸಮೀಕ್ಷೆ ಮತ್ತು ವಾಯು ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲು ನೌಕಾ ವಿಮಾನ ಮತ್ತು ಹೆಲಿಕಾಪ್ಟರ್‌ಗಳು ಸಹ ಸಿದ್ಧವಾಗಿವೆ. ತಡೆರಹಿತ ಸಮನ್ವಯವನ್ನು ಖಚಿತಪಡಿಸಿಕೊಳ್ಳಲು ಗುಜರಾತ್‌ನ ನೌಕಾಧಿಕಾರಿಗಳು ನಾಗರಿಕ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಹೊಂದಿದ್ದಾರೆ ಎಂದು ಮಾಹಿತಿ ನೀಡಿದೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
coronadead

ಕೊರೋನಾ ವೈದ್ಯಕೀಯ ಸಲಕರಣೆ ಖರೀದಿ ಹೆಸರಿನಲ್ಲಿ ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂಬ ಆರೋಪಗಳು ಕೇಳಿಬಂದಿವೆ. ನೀವು ಏನಂತೀರಿ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp