'ದೇಸೀ ಗೋವಿನ ಹಾಲಿನಲ್ಲಿ ಚಿನ್ನ ಇರುತ್ತೆ, ಬೀಫ್ ತಿನ್ನುವ ಬುದ್ಧಿಜೀವಿಗಳು ನಾಯಿಯನ್ನೂ ತಿನ್ನಲಿ'-ದಿಲೀಪ್ ಘೋಷ್ 

ದೇಸಿ ಹಸುಗಳು ಕೊಡುವ ಹಾಲಿನಲ್ಲಿ ಚಿನ್ನವಿದ್ದು ವಿದೇಶಿ ತಳಿ ಹಸುಗಳು ನಮ್ಮ ಗೋಮಾತೆಗಳಲ್ಲ, ಆಂಟೀಸ್ ಎಂಬ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್.
ದಿಲೀಪ್ ಘೋಷ್
ದಿಲೀಪ್ ಘೋಷ್

ಬುರ್ದ್ವಾನ: ದೇಸಿ ಹಸುಗಳು ಕೊಡುವ ಹಾಲಿನಲ್ಲಿ ಚಿನ್ನವಿದ್ದು ವಿದೇಶಿ ತಳಿ ಹಸುಗಳು ನಮ್ಮ ಗೋಮಾತೆಗಳಲ್ಲ, ಆಂಟೀಸ್ ಎಂಬ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್.


ನಮ್ಮ ದೇಶೀಯ ತಳಿ ಹಸುಗಳಿಗೆ ವಿಶೇಷ ಗುಣವಿರುತ್ತದೆ. ಅವುಗಳ ಹಾಲಿನಲ್ಲಿ ಚಿನ್ನ ಬೆರೆತಿರುತ್ತದೆ. ಹೀಗಾಗಿ ಹಾಲುಗಳು ಚಿನ್ನದ ಬಣ್ಣ ಹೊಂದಿರುತ್ತದೆ. ದೇಸಿ ಹಸುಗಳ ರಕ್ತನಾಳಗಳು ಸೂರ್ಯನ ಬೆಳಕಿನಿಂದ ಚಿನ್ನ ಉತ್ಪಾದಿಸುತ್ತದೆ. ಹೀಗಾಗಿ ಸ್ಥಳೀಯ ಹಸುಗಳನ್ನು ಮನೆಗಳಲ್ಲಿ ಸಾಕಬೇಕು. ನಾವು ದೇಸಿ ಹಸುಗಳ ಹಾಲನ್ನು ಕುಡಿದರೆ ಆರೋಗ್ಯವಾಗಿದ್ದು ಅನೇಕ ರೋಗಗಳನ್ನು ತಡೆಗಟ್ಟಬಹುದು ಎಂದು ಗೋಪ ಅಷ್ಟಮಿ ಕಾರ್ಯಕ್ರಮದಲ್ಲಿ ಹೇಳಿದರು.


ವಿದೇಶಗಳಿಂದ ಬರುವ ತಳಿಗಳು ಹಸುಗಳಲ್ಲ. ಅವು ಮೃಗಗಳಂತೆ. ವಿದೇಶಿ ತಳಿಗಳು ಹಸುಗಳಂತೆ ಇರುವುದಿಲ್ಲ. ಅವು ನಮ್ಮ ಗೋಮಾತೆಗಳಲ್ಲ. ಆಂಟಿಗಳು, ಅಂತವುಗಳನ್ನು ಪೂಜಿಸುವುದು ಒಳ್ಳೆಯದಲ್ಲ ಎಂದರು.


ಇಷ್ಟೇ ಅಲ್ಲದೆ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಅವರು, ರಸ್ತೆಯಲ್ಲಿ ಗೋಮಾಂಸ ತಿನ್ನುವ ಕೆಲವು ಬುದ್ದಿಜೀವಿಗಳು ತಮ್ಮ ಮನೆಗಳಲ್ಲಿ ನಾಯಿ ಮಾಂಸ ತಿನ್ನಲಿ ಎಂದಿದ್ದಾರೆ.


ಕೆಲ ಬುದ್ದಿಜೀವಿಗಳು ರಸ್ತೆಯಲ್ಲಿ ಗೋಮಾಂಸ ತಿನ್ನುತ್ತಾರೆ. ಅಂತವರಿಗೆ ನಾಯಿ ಮಾಂಸ ಕೂಡ ತಿನ್ನಿ ಎಂದು ಹೇಳುತ್ತೇನೆ. ಅಂತವರು ಯಾವ ಪ್ರಾಣಿಯ ಮಾಂಸ ತಿಂದರೂ ಕೂಡ ಅವರ ಆರೋಗ್ಯ ಚೆನ್ನಾಗಿರುತ್ತದೆ. ಹೀಗಿರುವಾಗ ರಸ್ತೆಯಲ್ಲಿ ಏಕೆ ತಿನ್ನಬೇಕು, ತಮ್ಮ ತಮ್ಮ ಮನೆಗಳಲ್ಲಿ ತಿಂದುಕೊಳ್ಳಲಿ ಎಂದಿದ್ದಾರೆ.


ಗೋವನ್ನು ನಮ್ಮ ತಾಯಿಯಂತೆ ಗೋಮಾತೆ ಎಂದು ಪೂಜಿಸುತ್ತೇವೆ. ಅದರ ಹಾಲನ್ನು ಕುಡಿದು ನಾವು ಬದುಕುತ್ತೇವೆ. ಗೋಮಾತೆ ವಿರುದ್ಧ ನಡೆದುಕೊಳ್ಳುವವರು, ಗೋವನ್ನು ಭಕ್ಷಿಸುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಬೇಕು. ಭರತ ಭೂಮಿಯಲ್ಲಿ ದನವನ್ನು ಕೊಂದು ಗೋಮಾಂಸ ತಿನ್ನುವುದು ಅಪರಾಧ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com