ಪಿಎಂಸಿ ಬ್ಯಾಂಕ್ ವಿತ್ ಡ್ರಾ ಮಿತಿ 50 ಸಾವಿರಕ್ಕೆ ಹೆಚ್ಚಿಸಿದ ಆರ್ ಬಿಐ

ಅವ್ಯವಹಾರ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಲಿಮಿಟೆಡ್(ಪಿಎಂಸಿ) ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ವಿಧಿಸಿದ್ದ ವಿತ್ ಡ್ರಾ ಮಿತಿಯನ್ನು 50 ಸಾವಿರಕ್ಕೆ ಹೆಚ್ಚಿಸಿದ್ದು, ಇದರಿಂದ ಶೇ.78 ರಷ್ಟು ಗ್ರಾಹಕರ ತಮ್ಮ ಖಾತೆಯಿಂದ ಸಂಪುರ್ಣ ಹಣ ಹಿಂಪಡೆಯಬಹುದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ಅವ್ಯವಹಾರ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಲಿಮಿಟೆಡ್(ಪಿಎಂಸಿ) ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ವಿಧಿಸಿದ್ದ ವಿತ್ ಡ್ರಾ ಮಿತಿಯನ್ನು 50 ಸಾವಿರಕ್ಕೆ ಹೆಚ್ಚಿಸಿದ್ದು, ಇದರಿಂದ ಶೇ.78 ರಷ್ಟು ಗ್ರಾಹಕರ ತಮ್ಮ ಖಾತೆಯಿಂದ ಸಂಪುರ್ಣ ಹಣ ಹಿಂಪಡೆಯಬಹುದಾಗಿದೆ.

ಎಟಿಎಂನಲ್ಲೂ 50 ಸಾವಿರ ರೂಪಾಯಿ ವರೆಗೆ ಹಣ ಡ್ರಾ ಮಾಡಲು ಆರ್ ಬಿಐ ಅವಕಾಶ ನೀಡಿದ್ದು, ಪಿಎಂಸಿ ಗ್ರಾಹಕರು ಸುಲಭವಾಗಿ ತಮ್ಮ ಹಣ ಪಡೆಯಬಹುದು.

ಬ್ಯಾಂಕ್ ಗ್ರಾಹಕರ ಹಿತ ಕಾಪಾಡಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳುವುದಾಗಿ ಆರ್ ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಬಹು-ರಾಜ್ಯ ಸಹಕಾರಿ ಬ್ಯಾಂಕ್ ಎಂದೇ ಖ್ಯಾತಿ ಪಡೆದಿರುವ ಪಿಎಂಸಿ ಬ್ಯಾಂಕ್, ಕರ್ನಾಟಕ, ಮಹಾರಾಷ್ಟ್ರ ದೆಹಲಿ, ಗೋವಾ, ಗುಜರಾತ್, ಆಂಧ್ರ ಪ್ರದೇಶ ಮತ್ತು ಮಧ್ಯ ಪ್ರದೇಶದಲ್ಲಿ ತನ್ನ ಶಾಖೆಗಳನ್ನು ಹೊಂದಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com