ನಿವೃತ್ತಿಗೂ ಕೆಲವೇ ದಿನಗಳ ಮುನ್ನ ಸಿಜೆಐ ರಂಜನ್ ಗೊಗೋಯ್ ಹೇಳಿದ್ದಿಷ್ಟು! 

ಸುಪ್ರೀಂ ಕೋರ್ಟ್ ನ ಹಾಲಿ ಸಿಜೆಐ ರಂಜನ್ ಗೊಗೋಯ್ ಅವರು ನಿವೃತ್ತಿಯಾಗುವುದಕ್ಕೆ ಇನ್ನು ಕೇವಲ 5 ದಿನಗಳಿದ್ದು, ಇದಕ್ಕೂ ಮುನ್ನ ರಂಜನ್ ಗೊಗೋಯ್ ವಕೀಲರಿಗೆ ಸೂಚನೆ ನೀಡಿದ್ದಾರೆ. 

Published: 07th November 2019 12:45 PM  |   Last Updated: 07th November 2019 12:45 PM   |  A+A-


All mentioning before Court 2, says CJI Ranjan Gogoi five 'working days' ahead of his retirement

ನಿವೃತ್ತಿಗೂ ಕೆಲವೇ ದಿನಗಳ ಮುನ್ನ ಸಿಜೆಐ ರಂಜನ್ ಗೊಗೋಯ್ ಹೇಳಿದ್ದಿಷ್ಟು!

Posted By : Srinivas Rao BV
Source : PTI

ನವದೆಹಲಿ: ಸುಪ್ರೀಂ ಕೋರ್ಟ್ ನ ಹಾಲಿ ಸಿಜೆಐ ರಂಜನ್ ಗೊಗೋಯ್ ಅವರು ನಿವೃತ್ತಿಯಾಗುವುದಕ್ಕೆ ಇನ್ನು ಕೇವಲ 5 ದಿನಗಳಿದ್ದು, ಇದಕ್ಕೂ ಮುನ್ನ ರಂಜನ್ ಗೊಗೋಯ್ ವಕೀಲರಿಗೆ ಸೂಚನೆ ನೀಡಿದ್ದಾರೆ. 

ತುರ್ತಾಗಿ ವಿಚಾರಣೆಯಾಗಬೇಕಿರುವ ಮುಂದಿನ ಎಲ್ಲಾ ಅರ್ಜಿಗಳ ಉಲ್ಲೇಖವನ್ನು ತಮ್ಮ ಉತ್ತರಾಧಿಕಾರಿ ನ್ಯಾ.ಎಸ್ಎ ಬೊಬ್ಡೆ ಅವರಿಗೆ ಸಲ್ಲಿಸುವಂತೆ ವಕೀಲರಿಗೆ ಸೂಚನೆ ನೀಡಿದ್ದಾರೆ. 

ಬೆಳಿಗ್ಗೆ 10.30 ರ ವೇಳೆಗೆ ಇನ್ನು ತಾವು ಯಾವುದೇ ಉಲ್ಲೇಖಗಳನ್ನೂ ಸ್ವೀಕರಿಸುವುದಿಲ್ಲ, ಮುಂದಿನ ಎಲ್ಲವನ್ನೂ ಮುಂದಿನ ಸಿಜೆಐ ನ್ಯಾ. ಎಸ್ಎ ಬೋಬ್ಡೆ ಅವರ ನೇತೃತ್ವದ ಪೀಠವಿರುವ ಕೋರ್ಟ್ 2 ಗೆ ಸಲ್ಲಿಸಲು ಹೇಳಿದ್ದಾರೆ.

ಅ.3, 2018 ರಂದು ರಂಜನ್ ಗೊಗೋಯ್ ಅವರು ಭಾರತದ 46 ನೇ ಮುಖ್ಯನ್ಯಾಯಮೂರ್ತಿಗಳಾಗಿ ಅಧಿಕಾರ ವಹಿಸಿಕೊಂಡಿದ್ದರು. ನ.17ಕ್ಕೆ ರಂಜನ್ ಗೊಗೋಯ್ ಅವರ ಕಾರ್ಯಾವಧಿ ಮುಕ್ತಾಯಗೊಳ್ಳಲಿದೆ. 

ನಿವೃತ್ತಿಗೆ ಇನ್ನು 5 ಕಾರ್ಯಾವಧಿ ದಿನಗಳು (working days)  ಉಳಿದಿದ್ದು, ಈ ಅವಧಿಯಲ್ಲಿ ಅಯೋಧ್ಯೆ, ರಾಫೆಲ್, ಶಬರಿಮಲೆ ಮರುಪರಿಶೀಲನಾ ಅರ್ಜಿಗಳೂ ಸೇರಿದಂತೆ ಮಹತ್ವದ 5 ಪ್ರಕರಣಗಳನ್ನು ಸಿಜೆಐ ಇತ್ಯರ್ಥಗೊಳಿಸಲಿದ್ದಾರೆ. 

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp